– ನಮ್ಮ ಕುಟುಂಬದಿಂದ ಇನ್ಯಾರೂ ರಾಜಕೀಯಕ್ಕೆ ಬರಲ್ಲ; ಪ್ರಿಯಾಂಕ್ ಖರ್ಗೆ
ಬೆಂಗಳೂರು: ವಿವಾದಕ್ಕೆ ಕಾರಣವಾಗಿದ್ದ ಸಿದ್ದಾರ್ಥ ವಿಹಾರ್ ಟ್ರಸ್ಟ್ ಸಿಎ ನಿವೇಶನವನ್ನ KIADBಗೆ ಖರ್ಗೆ ಕುಟುಂಬ ವಾಪಸ್ ನೀಡಿದೆ. 5 ಎಕರೆ ಸಿಎ ನಿವೇಶನ (CA Site) ಹಂಚಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಅಂತ ಆರೋಪ ಮಾಡಿದ್ರು. ಇಷ್ಟೇ ಅಲ್ಲದೇ ರಾಜ್ಯಪಾಲರಿಗೂ ದೂರು ನೀಡಿದ್ರು. ವಿವಾದದಿಂದ ಎಚ್ಚೆತ್ತಿರೋ ಸಿದ್ದಾರ್ಥ ವಿಹಾರ್ ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ನಿವೇಶನ ವಾಪಸ್ ನೀಡಿದ್ದಾರೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಾಹಿತಿ ನೀಡಿದ್ದಾರೆ.
ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ (Siddharth Vihar Trust) ನೀಡಿದ್ದ 5 ಎಕರೆ ಸಿಎ ನಿವೇಶನ ವಾಪಸ್ ನೀಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ನಾವು ಮೊದಲ ದಿನದಿಂದ ನಾವು ಹೇಳ್ತಿದ್ದೇವೆ. ತರಾತುರಿಯಲ್ಲಿ, ಕಾನೂನು ಬಾಹಿರವಾಗಿ ಹಂಚಿಕೆ ಆಗಿಲ್ಲ. ಬಿಜೆಪಿ ಅವರು ಸುಮ್ಮನೆ ಆರೋಪ ಮಾಡಿದ್ರು. ಅದಕ್ಕೆ ನಾವು ಡಿಫೆಂಡ್ ಮಾಡಿಕೊಂಡ್ವಿ. ರಾಹುಲ್ ಖರ್ಗೆ ಬಗ್ಗೆ ಬಿಜೆಪಿ ಅವರಿಗೆ ಅರಿವಿರಲಿಲ್ಲ. ಅರಿವು ಬಂದ ಕೂಡಲೇ ಬಿಜೆಪಿ (BJP) ಮಾತಾಡೋದು ಬಿಟ್ಟಿದ್ದಾರೆ. ರಾಹುಲ್ ಖರ್ಗೆ ಅವರ ವಿದ್ಯಾರ್ಹತೆ ನೋಡಿದ ಬಳಿಕ ಬಿಜೆಪಿ ಅವರು ಮಾತಾಡುತ್ತಿಲ್ಲ ಎಂದಿದ್ದಾರೆ.
Advertisement
Advertisement
ಮೊದಲು ರಾಜಕೀಯ ಮಾಡೋಕೆ ಮಾಡಿದ್ರು. ನಾನು, ನಮ್ಮ ತಂದೆ ಕಲಬುರ್ಗಿ ಎಂಪಿ ಬಿಟ್ಟು ಇನ್ಯಾರು ಇಲ್ಲ. ಏರೋ ಸ್ಪೇಸ್‌ನಲ್ಲಿ ಸ್ಕಿಲ್ ಡೆವಲಪ್ಮೆಂಟ್ ಮಾತಾಡಬೇಕು ಅಂತ ಆಸೆ ಇತ್ತು. ಹೀಗಾಗಿ ಅರ್ಜಿ ಹಾಕಿದ್ರು. ಮೇ 30ಕ್ಕೆ ಅರ್ಹತೆ ಆಧಾರದಲ್ಲಿ ನಿವೇಶನ ಹಂಚಿಕೆ ಆಗುತ್ತೆ. ಎಲ್ಲಾ ದಾಖಲಾತಿ ಇದೆ. ಡಿಆರ್‌ಡಿಒ, ಅಗ್ನಿ ಅವಾರ್ಡ್ ಪಡೆದ ರಾಹುಲ್ ಸ್ಕಿಲ್ ಡೆವಲಪ್ಮೆಂಟ್ ಮಾಡೋಕೆ ಹೊರಟಿದ್ರು. ಇದಕ್ಕೆ ಬಿಜೆಪಿ ರಾಜಕೀಯ ಮಾಡಿದ್ರು ಎಂದು ಕಿಡಿ ಕಾರಿದ್ದಾರೆ.
Advertisement
ರಾಹುಲ್ ಮೃದು ಸ್ವಭಾವದರು. ಸೆಪ್ಟೆಂಬರ್ 20 ರಂದು ಸೈಟ್ ವಾಪಸ್ ನೀಡಿದ್ದಾರೆ. ಕೆಐಎಡಿಬಿ ಸಿಇಒಗೆ ಪತ್ರ ಬರೆದು ನಿವೇಶನ ವಾಪಸ್ ಕೊಡೋದಾಗಿ ಹೇಳಿದ್ದಾರೆ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ 5 ಎಕರೆ ಸಿಎ ನಿವೇಶನ ಹಂಚಿಕೆ ಕಾನೂನು ಪ್ರಕಾರವೇ ಆಗಿದೆ. ಆದರೂ ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ಹೀಗಾಗಿ ಇದನ್ನ ವಾಪಸ್ ನೀಡೋದಾಗಿ ತಿಳಿಸಿರುವುದಾಗಿ ಹೇಳಿದ್ದಾರೆ.
Advertisement
ಟ್ರಸ್ಟ್ ಲಾಭ ಮಾಡಲು ಇಲ್ಲ. ನಿಯಮದ ಪ್ರಕಾರವಾಗಿಯೇ ಹಂಚಿಕೆ ಆಗಿದೆ, ಏಕೆಂದರೆ ಸಿಎ ಸೈಟ್ ಕೊಡೋವಾಗ ಯಾವುದೇ ರಿಯಾಯ್ತಿ ಇರೋದಿಲ್ಲ. ಹಂಚಿಕೆ ಆಗಿರೋ ನಿವೇಶನ 10 ವರ್ಷಕ್ಕೆ ಅಲರ್ಟ್ ಆಗಿದೆ. ಅದಕ್ಕೆ ಲೆಟರ್ ಕೊಟ್ಟಿದ್ದಾರೆ. ನಮ್ಮ ಉದ್ದೇಶ ಸ್ಕಿಲ್ ಡೆವಲಪ್ಮೆಂಟ್, ಎಜುಕೇಶನ್ ನೀಡುವ ಉದ್ದೇಶಕ್ಕೆ ಇತ್ತು. ಆದರೆ ಬಿಜೆಪಿ ಅವರು ಅನಗತ್ಯವಾಗಿ ರಾಜಕೀಯ ಮಾಡಿದ್ದಾರೆ. ವೈಯಕ್ತಿಕ ರಾಜಕೀಯದಿಂದ ಬೇಸರ ಆಗಿದೆ. ಕಲುಷಿತ ವಾತಾವರಣದಲ್ಲಿ ಟ್ರಸ್ಟ್ ಮುಂದುವರೆಸೋಕೆ ಸಾಧ್ಯವಿಲ್ಲ. ಹಾಗಾಗಿ ನಿವೇಶನ ವಾಪಸ್ ಪಡೆಯಬೇಕು ಅಂತ ರಾಹುಲ್ ಖರ್ಗೆ ಕೆಐಎಡಿಬಿಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಸೆ.22ರಂದು ರಾಹುಲ್ ಖರ್ಗೆ ಪತ್ರ ಬರೆದಿದ್ದರು, ಸೆ.27ಕ್ಕೆ ಕೆಐಎಡಿಬಿ ನಿವೇಶನ ಹಿಂಪಡೆಯಲು ಒಪ್ಪಿಗೆ ನೀಡಿತ್ತು. ಈಗಲೂ ಬಿಜೆಪಿಗೆ ಸವಾಲ್ ಹಾಕ್ತೀನಿ ನಿವೇಶನ ಹಂಚಿಕೆ ಅಕ್ರಮ ಅಂತ ಸಾಬೀತು ಮಾಡಲಿ. ಕ್ರಿಕೆಟ್ ಬಾರದೇ ಇರೋ ಅಮಿತ್ ಶಾ ಪುತ್ರ ಬಿಸಿಸಿಐ ಕಾರ್ಯದರ್ಶಿ ಆಗಿದ್ದಾರೆ. ಬಿಜೆಪಿಯವರು ತಮ್ಮ ಮಕ್ಕಳಿಗೆ ಎಷ್ಟು ಸೈಟ್‌ಗಳನ್ನ ಹಂಚಿಕೆ ಮಾಡಿದ್ದಾರೆ. ಬಿಜೆಪಿಗೆ ಸಮಸ್ಯೆ ಇರೋದು ಖರ್ಗೆ ಕುಟುಂಬದ್ದು ಎಂದು ತಿರುಗೇಟು ನೀಡಿದ್ದಾರೆ.
ತಾಯಿ ಕಷ್ಟಪಟ್ಟು ಬೆಳೆಸಿದ್ದಾರೆ:
ರಾಜ್ಯಪಾಲರಿಗೆ ಮಾಹಿತಿ ಕೊಡಬೇಕು ಎಂಬ ವಿಚಾರ ಕುರಿತು ಮಾತನಾಡಿ, ರಾಜ್ಯಪಾಲರಿಗೆ ನಾವು ಯಾಕೆ ಮಾಹಿತಿ ಕೊಡೋಣ? ಅಧಿಕಾರಿಗಳ ಬಳಿ ಮಾಹಿತಿ ಪಡೆಯಲಿ. ನನ್ನ ಮತ್ತು ನಮ್ಮ ತಂದೆ ಮೇಲಿನ ಸಿಟ್ಟು ನನ್ನ ಸಹೋದರನ ಮೇಲೆ ಬಿದ್ದಿದೆ. ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಾವು 5 ಜನ ಕಷ್ಟಪಟ್ಟು ಓದಿದ್ದೇವೆ, ನಮ್ಮ ತಂದೆ ತಾಯಿ ಕಷ್ಟ ಪಟ್ಟು ಓದಿಸಿದ್ದಾರೆ. ನಮ್ಮ ಮೇಲಿನ ರಾಜಕೀಯಕ್ಕೆ ನಮ್ಮ ಕುಟುಂಬದವರಿಗೆ ಹೀಗೆ ಆಗಿದೆ. ಈಗಲೂ ಚಾಲೆಂಜ್ ಮಾಡ್ತೀನಿ. ಬಿಜೆಪಿ ಅವರು ಇದು ಅಕ್ರಮವಾಗಿ ಕೊಟ್ಟಿದ್ದಾರೆ ಅಂತ ಸಾಬೀತು ಮಾಡಲಿ ಎಂದು ಬಿಜೆಪಿ ನಾಯಕರಿಗೆ ಸವಾಲ್ ಹಾಕಿದ್ದಾರೆ.
ನಮ್ಮ ಕುಟುಂಬದವರು ಯಾರೂ ರಾಜಕೀಯಕ್ಕೆ ಬರೊಲ್ಲ:
ಇನ್ನೂ ಕುಟುಂಬ ರಾಜಕೀಯ ಆರೋಪಕ್ಕೆ ಪ್ರತಿಕ್ರಿಯಿಸಿ, ನಮ್ಮ ಕುಟುಂಬದವರು ಯಾರೂ ರಾಜಕೀಯಕ್ಕೆ ಬರೊಲ್ಲ. ಚುನಾವಣೆ ಪ್ರಚಾರಕ್ಕೂ ಬರೊಲ್ಲ. ಅವರ ಪಾಡಿಗೆ ಅವರು ಖಾಸಗಿ ಕೆಲಸ ಮಾಡಿಕೊಂಡು ಹೋಗಿದ್ದಾರೆ. ಬಿಜೆಪಿ ಅವರದ್ದು ಮನುಸ್ಮೃತಿ ಮನಸ್ಥಿತಿ, ಬಿಜೆಪಿ ಅವರ ಮಕ್ಕಳಿಗೆ ಆರ್‌ಎಸ್‌ಎಸ್‌ಗೆ ಕಳಿಸೊಲ್ಲ. ಬಡವರ ಮಕ್ಕಳಿಗೆ ಮಾತ್ರ ಕಳುಹಿಸುತ್ತಾರೆ. ಬಡವರ ಮಕ್ಕಳಿಗೆ ಮಾತ್ರ ಕೇಸರಿ ಶಾಲು ಹಾಕಿಸ್ತಾರೆ. ಇವರ ಮಕ್ಕಳ ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.