– ಭೀಮ ಬದುಕೋದು ಕಷ್ಟ ಎನ್ನುತ್ತಿದ್ದಾರೆ ಸ್ಥಳೀಯರು
ಹಾಸನ: ಶಾರ್ಪ್ ಶೂಟರ್ ವೆಂಕಟೇಶ್ (Sharp Shooter Venkatesh) ಸಾವಿನ ಬಳಿಕ ಗಾಯಗೊಂಡಿದ್ದ ಆನೆ ಭೀಮ (Elephant Bheema) ಚಿಕಿತ್ಸೆ ಸಿಗದೇ ನರಳಾಡುತ್ತಿದೆ.
Advertisement
ಆಗಸ್ಟ್ 31 ರಂದು ಭೀಮನಿಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆ ವೇಳೆಯೇ ವೆಂಕಟೇಶ್ ಮೇಲೆ ಆನೆ ದಾಳಿ ನಡೆಸಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದರು. ವೆಂಕಟೇಶ್ ಸಾವಿನ ಬಳಿಕ ಅರಣ್ಯ ಇಲಾಖೆ ಭೀಮನಿಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆಯನ್ನೇ ಕೈಬಿಟ್ಟಿದೆ.
Advertisement
Advertisement
ಇದೀಗ ಭೀಮನಿಗೆ ಆಗಿರುವ ಗಾಯ ಉಲ್ಬಗೊಂಡಿದ್ದು ಓಡಾಡಲು ಸಾಧ್ಯವಾಗದೇ ಒಂದೆಡೆಯೇ ನಿಲ್ಲುತ್ತಿದೆ. ಕಾಡಾನೆಯ ಬೆನ್ನಿನ ಹಿಂಭಾಗದಲ್ಲಿ ಗಾಯ ಕೊಳೆಯುತ್ತಿದ್ದು, ಚಿಕಿತ್ಸೆ ನೀಡದಿದ್ದರೆ ಭೀಮ ಬದುಕುವುದು ಕಷ್ಟ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ವ್ಯಾನ್‌ಗೆ ಲಾರಿ ಡಿಕ್ಕಿ: 7 ಮಹಿಳೆಯರ ದುರ್ಮರಣ
Advertisement
ಭೀಮನನ್ನು ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದ್ದು, ಭೀಮನಿಗೆ ಶೀಘ್ರವೇ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಕುಂಬ್ಳೆಗೂ ತಟ್ಟಿದ ಬೆಂಗಳೂರು ಬಂದ್ ಬಿಸಿ – ಬಿಎಂಟಿಸಿಯಲ್ಲಿ ಪ್ರಯಾಣ
Web Stories