ಬೆಂಗಳೂರು: ಟಿಸಿಎಸ್(TCS) ಬಳಿಕ ಇನ್ಫೋಸಿಸ್(Infosys) ಈಗ ಉದ್ಯೋಗಿಗಳಿಗೆ ಕಚೇರಿಗೆ ಬರುವಂತೆ ಆದೇಶಿಸಿದೆ.
ಹಂತ ಹಂತವಾಗಿ ಉದ್ಯೋಗಿಗಳು ಕಚೇರಿ ಬರುವಂತೆ ಮಾನವ ಸಂಪನ್ಮೂಲ ವಿಭಾಗ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದೆ.
Advertisement
ಆರಂಭದಲ್ಲಿ ವಾರದ ಎರಡು ದಿನ ಕಚೇರಿಗೆ ಬರುವಂತೆ ಸೂಚಿಸಲಾಗಿದೆ. ಎರಡನೇ ಹಂತದಲ್ಲಿ ಉದ್ಯೋಗಿಗಳಿಗೆ ಅವರ ಆಯ್ಕೆಯ ಸ್ಥಳಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಇದನ್ನೂ ಓದಿ: ವಾರಕ್ಕೆ 80 ಗಂಟೆ ಕೆಲಸ, ಉಚಿತ ಆಹಾರ ಕಡಿತ, WFH ಕ್ಯಾನ್ಸಲ್ – ಟ್ವಿಟ್ಟರ್ ಉದ್ಯೋಗಿಗಳಿಗೆ ಮಸ್ಕ್ ಟಫ್ ರೂಲ್ಸ್
Advertisement
ಕೊನೆಯ ಹಂತದಲ್ಲಿ ಮೊದಲ ಮತ್ತು ಎರಡು ಹಂತದ ಬಗ್ಗೆ ಉದ್ಯೋಗಿಗಳಿಗೆ ಪ್ರತಿಕ್ರಿಯೆ ಪಡೆದು ನಿರ್ಧಾರ ತೆಗೆದುಕೊಳ್ಳಲಿದೆ. ಇನ್ಫೋಸಿಸ್ ಕಂಪನಿ ವಿಶ್ವದ 54 ದೇಶಗಳ 247 ಸ್ಥಳಗಳಲ್ಲಿ ತನ್ನ ಕಚೇರಿಯನ್ನು ಹೊಂದಿದೆ.
Advertisement
ಕೊರೊನಾ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ಮನೆಯಿಂದಲೇ ಉದ್ಯೋಗ ಮಾಡಲು ಅನುಮತಿ ನೀಡಿದ್ದವು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ವರ್ಕ್ ಫ್ರಂ ಹೋಂ(WFH) ಆಯ್ಕೆಯನ್ನು ಹಂತ ಹಂತವಾಗಿ ಕೊನೆಗಾಣಿಸಲು ಮುಂದಾಗಿವೆ.