ಮುಂಬೈ: ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಮುಂಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಮೇಲಿನ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಏಪ್ರಿಲ್ 1 ರಿಂದಲೇ ಎಲ್ಲಾ ವಾಹನಗಳ ಮೇಲಿನ ಬೆಲೆಯನ್ನು ಹೆಚ್ಚಿಸಲಾಗುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ಗುರುವಾರ ತಿಳಿಸಿದೆ.
Advertisement
ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರತಿಷ್ಠಿತ ಟಾಟಾ ಮೋಟರ್ಸ್ (TaTa Motors) ಏಪ್ರಿಲ್ 1 ರಿಂದ ವಾಣಿಜ್ಯ ವಾಹನಗಳ ಮೇಲಿನ ಬೆಲೆ ಶೇ.5 ರಷ್ಟು ಹೆಚ್ಚಿಸುವ ನಿರ್ಧಾರ ಪ್ರಕಟಿಸಿತ್ತು. ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಕಂಪನಿಯೂ ಏಪ್ರಿಲ್ 1 ರಿಂದ ತನ್ನ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಬೆಲೆ ಶೇ.2 ರಷ್ಟು ಹೆಚ್ಚಿಸುವುದಾಗಿ ತಿಳಿಸಿತ್ತು. ಈ ಬೆನ್ನಲ್ಲೇ ಮಾರುತಿ ಸುಜುಕಿ ಕಾರು ತಯಾರಕ ಕಂಪನಿ ಬೆಲೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ. ಇದನ್ನೂ ಓದಿ: ಗ್ಲಾಮರಸ್ ಲುಕ್‌ನ ಕವಾಸಕಿ Versys 1000 ಭಾರತದಲ್ಲಿ ಬಿಡುಗಡೆ – ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?
Advertisement
Advertisement
ಸರ್ಕಾರದ ನೀತಿಗಳು, ಹಣದುಬ್ಬರ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಆರ್ಥಿಕತೆ ಸರಿದೂಗಿಸಲು ಕಾರುಗಳ ಬೆಲೆ ಏರಿಸುವುದು ಅನಿವಾರ್ಯ. ಏಪ್ರಿಲ್‌ನಿಂದ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. ಇದನ್ನೂ ಓದಿ: ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್ – ಏಪ್ರಿಲ್ 1ರಿಂದ ಬೆಲೆ ಏರಿಕೆ
Advertisement
ಮಾರುತಿ ಸುಜುಕಿ ನಿರಂತರವಾಗಿ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಮತ್ತು ಭಾಗಶಃ ಸರಿದೂಗಿಸಲು ಪ್ರಯತ್ನಿಸುತ್ತಿದೆ. ಇದರ ಹೊರತಾಗಿಯೂ ವಾಹನಗಳ ಬೆಲೆ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೇಳಿದೆ. ಆದರೆ ನಿಖರ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.