ಮುಂಬೈ: ಭಾರತದ ಎಲ್ಲ ಕಲಾವಿದರು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಆದರೆ ಈಗ ಸ್ಟಾರ್ಗಳ ನಂತರ ಬಚ್ಚಾ ಪಾರ್ಟಿ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ.
ಇತ್ತೀಚೆಗೆ ರಿತೇಶ್ ದೇಶಮುಖ್ ಕಿಚ್ಚ ಸುದೀಪ್ ಅವರ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅಲ್ಲದೇ ತಮ್ಮ ಫಿಟ್ನೆಸ್ ಚಾಲೆಂಜ್ ಸ್ವೀಕರಿಸುವಂತೆ ತಮ್ಮ ಮಗ ರಹೈಲ್ನಿಗೆ ಟ್ಯಾಗ್ ಕೂಡ ಮಾಡಿದ್ದರು.
Advertisement
ಸದ್ಯ ರಹೈಲ್ ಇನ್ಡೋರ್ ರಾಕ್ ಕ್ಲೈಬಿಂಗ್ ಮಾಡುವ ಮೂಲಕ ತಮ್ಮ ತಂದೆ ನೀಡಿದ ಚಾಲೆಂಜ್ ಅನ್ನು ಸ್ವೀಕರಿಸಿದ್ದಾನೆ. ರಿತೇಶ್ ಅವರ ಪತ್ನಿ ಜೆನಿಲಿಯಾ ದೇಶಮುಖ್ ತಮ್ಮ ಮಗನ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಜೆನಿಲಿಯಾ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ, “ರಹೈಲ್ ಈ ಬೇಬಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸುತ್ತಿದ್ದಾನೆ. ಅಲ್ಲದೇ ಕರೀನಾ ಹಾಗೂ ಸೈಫ್ ಮಗ ತೈಮೂರ್ ನಿಗೆ, ಕರಣ್ ಜೋಹರ್ ಅವಳಿ ಮಕ್ಕಳಾದ ರೂಹಿ ಹಾಗೂ ಯಶ್, ತುಶಾರ್ ಕಪೂರ್ ಮಗ ಲಕ್ಷ್ಯ ಹಾಗೂ ಅರ್ಪಿತಾ ಖಾನ್ ಮಗ ಅಹಿಲ್ ಗೆ ಈ ಚಾಲೆಂಜ್ ನೀಡಿದ್ದಾನೆ.
Advertisement
ಸದ್ಯ ರಹೈಲ್ ಫಿಟ್ನೆಸ್ ವಿಡಿಯೋ ನೋಡಿ ಬಾಲಿವುಡ್ ಮಂದಿ ಖುಷಿಯಾಗಿದ್ದಾರೆ. ಅಲ್ಲದೇ ಕರಣ್ ಜೋಹರ್, “ಓಎಂಜಿ. ಆತನನ್ನು ನೋಡಿ. ಅವನೊಬ್ಬ ರಾಕ್ಸ್ಟಾರ್. ಆತನನ್ನು ನೋಡಿ ನನಗೆ ತುಂಬಾ ಭಯವಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Rahyl accepts his Baba’s #FitnessChallenge … He further challenges the Bachcha Gang….. #BachceFitTohDeshFit pic.twitter.com/5zfA0AUxRK
— Genelia Deshmukh (@geneliad) August 29, 2018
Thank You darling @Sophie_Choudry https://t.co/0Zc5qFkl5w
— Genelia Deshmukh (@geneliad) August 29, 2018
https://twitter.com/karanjohar/status/1034707327906021378?ref_src=twsrc%5Etfw%7Ctwcamp%5Etweetembed%7Ctwterm%5E1034707327906021378&ref_url=https%3A%2F%2Fwww.ndtv.com%2Fentertainment%2Friteish-deshmukh-and-genelia-dsouzas-son-rahyl-2-adorably-nominates-taimur-in-cute-fitness-challenge-1908114