ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ದೇಶ ತತ್ತರಿಸಿ ಹೋಗಿದೆ. ದೇಶದ ಜನರ ಬದುಕು ಬೀದಿಪಾಲಾಗಿದೆ. ಆಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಮಿತ್ರ ರಾಷ್ಟ್ರಕ್ಕೆ ನೆರೆಯ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಶ್ರೀಲಂಕಾ ಅಷ್ಟೇ ಅಲ್ಲ ಇನ್ನೂ ಅನೇಕ ರಾಷ್ಟ್ರಗಳು ಇಂತಹ ಭೀಕರ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
ಅಗತ್ಯ ವಸ್ತುಗಳ ಖರೀದಿ ಹಾಗೂ ವಹಿವಾಟಿಗೆ ಡಾಲರ್ ಕೊರತೆ, ಸಾಲ, ಹಣದುಬ್ಬರ, ಸೇರಿದಂತೆ ಹಲವಾರು ಸಮಸ್ಯೆಗಳಿಂದ 12 ಅಭಿವೃದ್ಧಿಶೀಲ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾದ ಪರಿಸ್ಥಿತಿಯಲ್ಲಿವೆ. ಆ ದೇಶಗಳಿಗೆ ಶ್ರೀಲಂಕಾದ ಪರಿಸ್ಥಿತಿಯೇ ಎದುರಾಗುವ ಸಾಧ್ಯತೆ ಇದೆ. ಆ ದೇಶಗಳು ಯಾವುವು? ಅಲ್ಲಿನ ಬಿಕ್ಕಟ್ಟುಗಳೇನು ಎಂಬ ಬಗ್ಗೆ ಇಲ್ಲಿದೆ ವಿವರ.
Advertisement
ಅರ್ಜೆಂಟೀನಾ
ಆರ್ಥಿಕ ಬಿಕ್ಕಟ್ಟು ಎದುರಿಸುವ ಸಾಧ್ಯತೆಯಿರುವ ದೇಶಗಳ ಪಟ್ಟಿಯಲ್ಲಿ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿದೆ. ಪೆಸೊ (ಕರೆನ್ಸಿ) ಈಗ ಕಪ್ಪು ಮಾರುಕಟ್ಟೆಯಲ್ಲಿ ಸುಮಾರು ಶೇ.50 ರಿಯಾಯಿತಿಯಲ್ಲಿ ವಹಿವಾಟು ನಡೆಸುತ್ತಿದೆ. ಮೀಸಲುಗಳು ಕಡಿಮೆಯಾಗಿದೆ. ಡಾಲರ್‌ನಲ್ಲಿ ಕೇವಲ 20 ಸೆಂಟ್‌ಗಳಲ್ಲಿ ಬಾಂಡ್ ವ್ಯಾಪಾರ ನಡೆಯುತ್ತಿದೆ. 2024ರ ವರೆಗೆ ಸಾಲದ ಹೊರೆ ದೇಶವನ್ನು ಹೆಚ್ಚು ಬಾಧಿಸುವುದಿಲ್ಲ. ಆದರೆ ಆ ನಂತರ ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುವ ಸಾಧ್ಯತೆಯಿದೆ. ಮುಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಸಿಗುವ ಸಾಲವೂ ನಿಲ್ಲಬಹುದು ಎಂದು ಅರ್ಜೆಂಟೀನಾ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಭಾರತ ಖರೀದಿಸುತ್ತಿರುವ S-400 ಕ್ಷಿಪಣಿಗೆ ಎದುರಾಗಿದ್ದ ಕಾಟ್ಸಾ ಭೀತಿ ದೂರ
Advertisement
Advertisement
ಉಕ್ರೇನ್
ರಷ್ಯಾದ ಆಕ್ರಮಣದಿಂದ ತತ್ತರಿಸಿ ಹೋಗಿರುವ ಉಕ್ರೇನ್ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ರಷ್ಯಾ ಸೇನೆ ನಡೆಸುತ್ತಿರುವ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನ್ ಈಗಾಗಲೇ 20 ಬಿಲಿಯನ್ ಡಾಲರ್‌ನಷ್ಟು ಸಾಲ ಮಾಡಿದ್ದು, ಅದನ್ನು ತೀರಿಸುವುದು ದೇಶಕ್ಕೆ ತಲೆನೋವಾಗಿದೆ. ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಅಪಾರ ನಷ್ಟ ಸಂಭವಿಸಿದೆ.
Advertisement
ಟುನೀಶಿಯಾ
ಐಎಂಎಫ್‌ನಿಂದ ನೆರವು ಪಡೆಯುತ್ತಿರುವ ದೇಶಗಳ ಸಮೂಹವನ್ನೇ ಆಫ್ರಿಕಾ ಹೊಂದಿದೆ. ಆದರೆ ಟುನೀಶಿಯಾ ಈ ಸಂಕಷ್ಟದ ಹಾದಿಯಲ್ಲಿದೆ. ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಅಂತರಾಷ್ಟ್ರೀಯ ಹಣಕಾಸು ನಿಧಿಯೊಂದಿಗಿನ ಒಪ್ಪಂದವು ಅನಿವಾರ್ಯವಾಗುತ್ತದೆ ಎಂದು ಟುನೀಶಿಯಾದ ಕೇಂದ್ರ ಬ್ಯಾಂಕ್ ಮುಖ್ಯಸ್ಥ ಮಾರೂವಾನ್ ಅಬಾಸ್ಸಿ ಅಭಿಪ್ರಾಯಪಟ್ಟಿದ್ದಾರೆ.
ಘಾನಾ
ಘಾನಾ ದೇಶ ಹೆಚ್ಚಿನ ಸಾಲ ಮಾಡಿರುವುದರಿಂದ ಸಾಲ-ಜಿಡಿಪಿ ಅನುಪಾತವು ಸುಮಾರು ಶೇ.85ಕ್ಕೆ ಏರಿದೆ. ದೇಶದ ಕರೆನ್ಸಿ ಸೆಡಿ ಈ ಹಣಕಾಸು ವರ್ಷದಲ್ಲಿ ಕಾಲು ಭಾಗದಷ್ಟು ಮೌಲ್ಯ ಕಳೆದುಕೊಂಡಿದೆ. ತೆರಿಗೆಯಿಂದ ಬರುವ ಹಣದಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಸಾಲದ ಬಡ್ಡಿ ಪಾವತಿಗೆ ವ್ಯಯಿಸಲಾಗುತ್ತಿದೆ. ಹಣದುಬ್ಬರವೂ ಶೇ.30ರ ಸಮೀಪಕ್ಕೆ ಬರುತ್ತಿದೆ. ಇದನ್ನೂ ಓದಿ: ಅನುಮತಿಯಿಲ್ಲದೇ ದೇಶ ಬಿಟ್ಟು ಹೋಗಬೇಡಿ: ರಾಜಪಕ್ಸೆ ಕುಟುಂಬಕ್ಕೆ ಸುಪ್ರೀಂ ಕೋರ್ಟ್ ಆದೇಶ
ಈಜಿಪ್ಟ್
ಈಜಿಪ್ಟ್ ಸುಮಾರು ಶೇ.95 ಸಾಲ-ಜಿಡಿಪಿ ಅನುಪಾತವನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಪಾವತಿಸಲು ಈಜಿಪ್ಟ್ 100 ಬಿಲಿಯನ್ ಕರೆನ್ಸಿ ಸಾಲವನ್ನು ಹೊಂದಿದೆ.
ಕೀನ್ಯಾ
ಕೀನ್ಯಾ ತನ್ನ ಆದಾಯದಲ್ಲಿ ಸುಮಾರು ಶೇ.30 ಪಾಲನ್ನು ಬಡ್ಡಿ ಪಾವತಿಗೆ ಖರ್ಚು ಮಾಡುತ್ತದೆ. ಅದರ ಬಾಂಡ್‌ಗಳು ಅವುಗಳ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿವೆ.
ಇಥಿಯೋಪಿಯಾ
ಈ ದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಪ್ರಗತಿಯನ್ನು ತಡೆಹಿಡಿದಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುವ ರಾಷ್ಟ್ರಗಳ ಸಾಲಿನಲ್ಲಿ ಇದು ಕೂಡ ಇದೆ.
ಎಲ್ ಸಾಲ್ವಡಾರ್
ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಮಾಡುವುದು IMF ಭರವಸೆಗಳಿಗೆ ಬಾಗಿಲು ಮುಚ್ಚಿದಂತಾಗಿದೆ. 800 ಮಿಲಿಯನ್ ಡಾಲರ್ ಬಾಂಡ್‌ಗಳು 30% ರಿಯಾಯಿತಿಯಲ್ಲಿ ಮತ್ತು ದೀರ್ಘಾವಧಿಯವು 70% ರಿಯಾಯಿತಿಯಲ್ಲಿ ವಹಿವಾಟು ನಡೆಸುವ ಹಂತಕ್ಕೆ ಟ್ರಸ್ಟ್ ಕುಸಿದಿದೆ.
ಪಾಕಿಸ್ತಾನ
ಪಾಕಿಸ್ತಾನವು ಈ ವಾರ ನಿರ್ಣಾಯಕ IMF ಒಪ್ಪಂದವನ್ನು ಮಾಡಿದೆ. ಅಗತ್ಯ ವಸ್ತು, ಸಂಪನ್ಮೂಲ ಆಮದಿಗೆ ಹೆಚ್ಚಿನ ವಿನಿಯೋಗ ಮಾಡುತ್ತಿರುವುದು ದೇಶವನ್ನು ಬಿಕ್ಕಟ್ಟಿಗೆ ತಳ್ಳಲಿದೆ. ವಿದೇಶಿ ಕರೆನ್ಸಿ ಮೀಸಲು 9.8 ಶತಕೋಟಿಯಷ್ಟು ಕಡಿಮೆಯಾಗಿದೆ. ಇದು ಐದು ವಾರಗಳ ಆಮದುಗಳಿಗೆ ಸಾಕಾಗುವುದಿಲ್ಲ. ಪಾಕಿಸ್ತಾನದ ರೂಪಾಯಿ ದಾಖಲೆಯ ಮಟ್ಟಕ್ಕೆ ಕುಸಿದಿದೆ. ಹೊಸ ಸರ್ಕಾರವು ತನ್ನ ಆದಾಯದ 40% ಅನ್ನು ಬಡ್ಡಿ ಪಾವತಿಗೆ ಖರ್ಚು ಮಾಡುತ್ತಿದೆ.
ಬೆಲಾರಸ್
ಪಾಶ್ಚಿಮಾತ್ಯ ನಿರ್ಬಂಧಗಳು ಕಳೆದ ತಿಂಗಳು ರಷ್ಯಾವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಉಕ್ರೇನ್ ಮೇಲಿನ ಯುದ್ಧದ ವಿಚಾರವಾಗಿ ರಷ್ಯಾ ಬೆಂಬಲಕ್ಕೆ ನಿಂತಿರುವ ಬೆಲಾರಸ್ ಕೂಡ ಈಗ ನಿರ್ಬಂಧಗಳೊಂದಿಗೆ ಆರ್ಥಿಕ ಬಿಕ್ಕಟ್ಟಿಗೆ ದೂಡಲ್ಪಟ್ಟಿದೆ. ಇದನ್ನೂ ಓದಿ: ಖಶೋಗಿ ಹತ್ಯೆಗೆ ಸೌದಿ ಕ್ರೌನ್ ಪ್ರಿನ್ಸ್ ಹೊಣೆಗಾರಿಕೆ: ಬೈಡನ್
ಈಕ್ವೆಡಾರ್
ಲ್ಯಾಟಿನ್ ಅಮೆರಿಕನ್ ದೇಶವು ಕಳೆದ ಎರಡು ವರ್ಷಗಳಿಂದ ಆರ್ಥಿಕ ಕುಸಿತ ಸಮಸ್ಯೆ ಎದುರಿಸುತ್ತಿದೆ. ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಮತ್ತಷ್ಟು ಸಂಕಷ್ಟ ಎದುರಾಗಿದೆ.
ನೈಜೀರಿಯಾ
ಬಾಂಡ್ ಸ್ಪ್ರೆಡ್‌ಗಳು ಕೇವಲ 1,000 bps ಗಿಂತ ಹೆಚ್ಚಿವೆ. ನೈಜೀರಿಯಾ ತನ್ನ ಸಾಲದ ಮೇಲೆ ಬಡ್ಡಿಯನ್ನು ಪಾವತಿಸಲು ಸುಮಾರು 30% ಸರ್ಕಾರದ ಆದಾಯವನ್ನು ಖರ್ಚು ಮಾಡುತ್ತದೆ.