ರಾಮನಗರ: ಮಂಡ್ಯದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ ಟ್ರೋಲ್ ಬಳಿಕ ಇದೀಗ ಅನಿತಕ್ಕಾ ಎಲ್ಲಿದ್ದೀರಾ ಎಂಬ ಟ್ರೋಲ್ ರಾಮನಗರದಲ್ಲಿ ಸದ್ದು ಮಾಡುತ್ತಿದೆ.
ನಿಖಿಲ್ ಎಲ್ಲಿದ್ದೀಯಪ್ಪ ಟ್ರೋಲ್‍ನಿಂದ ಮಂಡ್ಯಗೆ ನಿಖಿಲ್ ಆಗಮಿಸಿದ್ರು. ಅದೇ ರೀತಿ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಅನಿತಕ್ಕಾ ಎಲ್ಲಿದ್ದೀರಿ ಎಂದು ಟ್ರೋಲ್ ಮಾಡಿದರೆ ಕ್ಷೇತ್ರಕ್ಕೆ ಭೇಟಿ ನೀಡಬಹುದು, ಸಾರ್ವಜನಿಕರ ಸಮಸ್ಯೆ ಆಲಿಸಬಹುದು ಎಂದು ಈ ಟ್ರೋಲ್ ಶುರು ಮಾಡಿದ್ದಾರೆ ಎನ್ನಲಾಗಿದೆ.
Advertisement
Advertisement
ರಾಮನಗರದ ವಿನೋದ್ ಹಾಗೂ ರುದ್ರದೇವ್ ಎಂಬವರು ಮಾಡಿರುವ ಟ್ರೋಲ್ ವೀಡಿಯೋದಲ್ಲಿ, ಈ ಹಿಂದೆ ರಾಮನಗರ ಕ್ಷೇತ್ರದಲ್ಲಿ ಅದರಲ್ಲೂ ನಗರ ಪ್ರದೇಶದಲ್ಲಿ 3 ದಿನಕ್ಕೊಮ್ಮೆಯಾದ್ರೂ ಮೋರಿ ನೀರನ್ನು ಹರಿಸುತ್ತಿದ್ದರು. ಆದರೆ ಇದೀಗ ಅದನ್ನೂ ಕೇಳುವಂತಿಲ್ಲ. 10 ರಿಂದ 15 ದಿನಗಳಿಗೊಮ್ಮೆಯಾದ್ರೂ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಶಾಸಕಿಯಾದ ಅನಿತಾಕುಮಾರಸ್ವಾಮಿಯವರು ಎಲ್ಲಿದ್ದಾರೋ ಗೊತ್ತಿಲ್ಲ. ಹೀಗಾಗಿ ಎಲ್ಲಿದ್ದೀರಿ ಅನಿತಕ್ಕಾ ಎಂದು ಕ್ಷೇತ್ರದ ಜನ ಟ್ರೋಲ್ ಮಾಡಲು ಆರಂಭಿಸಿದ್ದಾರೆ.
Advertisement
`ಜಾಗ್ವಾರ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ `ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದರು. ಆ ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿತ್ತು.
Advertisement