ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಸಿಕಂದರ್’ ಚಿತ್ರದ ಸೋಲಿನ ಬೆನ್ನಲ್ಲೇ ಬಾಲಿವುಡ್‌ನ ‘ಥಾಮಾ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸೋಲಿನ ಕಹಿ ನಡುವೆ ಹೊಸ ಸಿನಿಮಾದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ರೀಲ್ಸ್ ಕೇಸ್: ‘ಬಿಗ್ ಬಾಸ್’ ರಜತ್ ಮತ್ತೆ ಅರೆಸ್ಟ್, ವಿನಯ್‌ಗೂ ಬಂಧನ ಭೀತಿ
ಇತ್ತೀಚೆಗೆ ಸಲ್ಮಾನ್ ಖಾನ್ (Salman Khan) ಜೊತೆ ನಟಿಸಿದ್ದ ‘ಸಿಕಂದರ್’ (Sikandar) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ‘ಸಿಕಂದರ್’ ಚಿತ್ರ ಹೀನಾಯವಾಗಿ ಸೋತಿದ್ರೂ ಕೂಡ ರಶ್ಮಿಕಾ ಮಂದಣ್ಣಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಸದ್ಯ ಅವರು ‘ಥಾಮಾ’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಇದನ್ನೂ ಓದಿ:ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ
ಡೈರೆಕ್ಟರ್ ಅದಿತ್ಯ ನಿರ್ದೇಶನದ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾಗೆ ರಶ್ಮಿಕಾ ನಾಯಕಿಯಾಗಿದ್ದಾರೆ. ಅವರೊಂದಿಗೆ ಪರೇಶ್ ರಾವಲ್ ಮತ್ತು ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಅಕ್ಟೋಬರ್ 19ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ರಿವೀಲ್ ಮಾಡಿದೆ.
ಮೊದಲ ಬಾರಿಗೆ ಆಯುಷ್ಮಾನ್ ಮತ್ತು ರಶ್ಮಿಕಾ ಜೊತೆಯಾಗಿ ನಟಿಸುತ್ತಿರೋದ್ರಿಂದ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ‘ಸ್ತ್ರೀ 2’ ನಿರ್ಮಿಸಿ ಗೆದ್ದಿದ್ದ ಮ್ಯಾಡಾಕ್ ಫಿಲ್ಮ್ಸ್ ಸಂಸ್ಥೆ ‘ಥಾಮಾ’ (Thama) ಚಿತ್ರವನ್ನು ನಿರ್ಮಾಣ ಮಾಡ್ತಿದೆ.