ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ (Shivaraj Kumar) ಸೌದತ್ತಿ ಎಲ್ಲಮ್ಮ (Yallamma) ದೇವಸ್ಥಾನಕ್ಕೆ ಭೇಟಿ ನೀಡಿದರು. ಬೆಳಗಾವಿಯಲ್ಲಿ “ಉತ್ತರಕಾಂಡ” ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ. ಹಿಂದೆ ಶ್ರೀರಾಮ್, ಮೈಲಾರಿ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ಪಾಲಿಗೂ ಸೌದತ್ತಿ ಎಲ್ಲಮ್ಮ ಅದೃಷ್ಟ ದೇವತೆ. ಹಾಗಾಗಿ ಉತ್ತರಕಾಂಡದ ಚಿತ್ರೀಕರಣದ ನಂತರ ಶಿವಣ್ಣ ತಾಯಿ ಆಶಿರ್ವಾದವನ್ನು ಪಡೆದಿರುತ್ತಾರೆ.
ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ “ಉತ್ತರಕಾಂಡ” (Uttarkanda) ರೋಹಿತ್ ಪದಕಿ (Pradeep Madaki) ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್ ಡ್ರಾಮಾ ಚಿತ್ರವಾಗಿದೆ.
ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ ಧನಂಜಯ, ಐಶ್ವರ್ಯ ರಾಜೇಶ್,ಭಾವನಾ ಮೆನನ್, ದಿಗಂತ್ ಮಂಚಾಲೆ, ರಂಗಾಯಣ ರಘು, ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಬಾಲಿವುಡ್ ಹೆಸರಾಂತ ಗಾಯಕ,ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ.