ಧನುಷ್ ಜೊತೆಗಿನ ವಿಚ್ಛೇದನದ ಬಳಿಕ ಪ್ರೀತಿ ಬಗ್ಗೆ ಐಶ್ವರ್ಯಾ ಮಾತು

Public TV
2 Min Read
dhanush

ಚೆನ್ನೈ: ಸೌತ್ ಸೂಪರ್ ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಕೆಲವು ದಿನಗಳ ಹಿಂದಷ್ಟೇ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಈ ಸುದ್ದಿ ಅನೇಕ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು. ಇದೀಗ ಐಶ್ವರ್ಯಾ ರಜನಿಕಾಂತ್ ಅವರು ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

dhanush

ಸದ್ಯ ಹಲವು ದಿನಗಳ ಬಳಿಕ ಐಶ್ವರ್ಯಾ ರಜನಿಕಾಂತ್ ಜೀವನ ಮತ್ತು ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾವು ಜೀವನದಲ್ಲಿ ಎಲ್ಲವನ್ನು ನಿಭಾಯಿಸಬೇಕು ಎಂದು ನಾನು ಭಾವಿಸುತ್ತೇನೆ. ನಮ್ಮ ದಾರಿಯಲ್ಲಿ ನಮಗೆ ಏನು ಎದುರಾಗುತ್ತದೆಯೋ ಅದನ್ನು ನಾವು ಎದುರಿಸಬೇಕಾಗಿದೆ. ಅಂತಿಮವಾಗಿ, ನಮಗೆ ಏನು ಸಿಗಬೇಕೋ ಅದು ನಮಗೆ ಸಿಗುತ್ತದೆ. ನಾನು ಈ ಹಿಂದೆಯೇ ಹೇಳಿದ್ದೇನೆ. ನಾನು ಕಲಿಯುತ್ತಿದ್ದೇನೆ ಮತ್ತು ನನ್ನನ್ನು ಕಲಿಯಲು ಬಿಡಬೇಕೆಂದು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:  ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

ಪ್ರೀತಿ ಎಂಬುವುದು ಸಾಮಾನ್ಯವಾದ ಭಾವನೆಯಾಗಿದೆ. ಇದು ಒಬ್ಬ ಮನುಷ್ಯ ಅಥವಾ ಒಂದು ವೈಯಕ್ತಿಕ ವಿಷಯದೊಂದಿಗೆ ಸಂಬಂಧಿಸಿಲ್ಲ. ನಾನು ವಿಕಸನಗೊಳ್ಳುತ್ತಿದ್ದಂತೆ, ಪ್ರೀತಿಯ ವ್ಯಾಖ್ಯಾನವು ನನ್ನೊಂದಿಗೆ ವಿಕಸನಗೊಳ್ಳುತ್ತಿದೆ. ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ. ನಾನು ನನ್ನ ತಾಯಿಯನ್ನು ಪ್ರೀತಿಸುತ್ತೇನೆ. ನಾನು ನನ್ನ ಮಕ್ಕಳನ್ನು ಪ್ರೀತಿಸುತ್ತೇನೆ. ಹಾಗಾಗಿ ಪ್ರೀತಿ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗುವುದಿಲ ಎಂದು ನಾನು ಭಾವಿಸುತ್ತೇನೆ. ಹೌದು, ನಾನು ಎಲ್ಲರನ್ನು ಪ್ರೀತಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಐಶ್ವರ್ಯಾ ರಜನಿಕಾಂತ್ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಅದರಿಂದ ಹೊರಬರುವುದು ಎಷ್ಟು ಕಷ್ಟ ಎಂದು ತಿಳಿಸಿದ್ದಾರೆ ಮತ್ತು ತಮ್ಮ ಸಂಕಷ್ಟದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದಕ್ಕಾಗಿ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಯಾವೆಲ್ಲ ಚಿತ್ರಗಳು ಸ್ಪರ್ಧಾ ಕಣದಲ್ಲಿ?

ರಜನಿಕಾಂತ್ ಅವರ ಹಿರಿಯ ಮಗಳಾಗಿರುವ ಐಶ್ವರ್ಯಾ ಅವರು 2004 ರಲ್ಲಿ ಧನುಷ್ ಅವರೊಂದಿಗೆ ವಿವಾಹವಾದರು. ಸದ್ಯ ಇವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಮಕ್ಕಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *