ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಶರೀಫ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಪತ್ರ ಬರೆದಿರುವುದು ಯಾಕೆ ಎನ್ನುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳಲ್ಲಿ ಮೋಹನ್ ಭಾಗವತ್ ಹೆಸರು ಪ್ರಸ್ತಾಪ ವಾಗಿತ್ತು. ದೇಶದ ಪ್ರಜೆ ಯಾಗಿ ನನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಮೋಹನ್ ಭಾಗವತ್ ಯಾವ ದೃಷ್ಟಿಯಿಂದಲೂ ಅನರ್ಹರಲ್ಲ ಅವರು ರಾಷ್ಟ್ರಪತಿ ಹುದ್ದೆಗೆ ಅರ್ಹ ಎಂದು ಹೇಳುವ ಮೂಲಕ ಭಾಗವತ್ ಪರ ಬ್ಯಾಟ್ ಬೀಸಿದರು.
Advertisement
ರಾಷ್ಟ್ರಪತಿ ಹುದ್ದೆ ಏರಿದವರು ಸಂವಿಧಾನದ ಅಡಿ ಕೆಲಸ ಮಾಡಬೇಕು. ಹೀಗಾಗಿ ಆರ್‍ಎಸ್‍ಎಸ್ ನಿಂದಲೂ ಬಂದರೂ ಸಂವಿಧಾನದ ಅಡಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ನಾನು ಮೋಹನ್ ಭಾಗವತ್ ಅರ್ಹ ಎಂದು ಪತ್ರ ಬರೆದಿದ್ದೇನೆ ಎಂದು ಸಮರ್ಥಿಸಿದರು.
Advertisement
ಈ ಪತ್ರ ಬರೆದ ತಕ್ಷಣಕ್ಕೆ ನಾನು ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್ ನನಗೆ ಎಲ್ಲವೂ ಕೊಟ್ಟಿದೆ. ಬಿಜೆಪಿಗೆ ಹೋಗುವ ಪ್ರಶ್ನೆ ಯೇ ಇಲ್ಲ, ಕಾಂಗ್ರೆಸ್ ಕಡೆಗಣಿಸಿ ಮಾತನಾಡುವುದು ಧರ್ಮವೂ ಅಲ್ಲ ನೀತಿಯೂ ಅಲ್ಲ. ದೇಶದ ಐಕ್ಯತೆ ಸಮಗ್ರತೆ ದೃಷ್ಟಿಯಿಂದ ಈ ಪತ್ರ ಬರೆದಿದ್ದೇನೆ ಎಂದು ಹೇಳಿದರು.
Advertisement
ಜಾಫರ್ ಶರೀಫ್ ಅವರು ಮೋಹನ್ ಭಾಗವತ್ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡಿ ಎಂದು ಮೋದಿಗೆ ಪತ್ರ ಬರೆದಿರುವುದು ಸಂಘ ಪರಿವಾರದ ನಾಯಕರ ಅಚ್ಚರಿಗೆ ಕಾರಣವಾಗಿದ್ದರೆ, ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ಇದನ್ನೂ ಓದಿ: ಆರ್‍ಎಸ್‍ಎಸ್‍ಗಾಗಿ ದುಡಿಯುತ್ತೇನೆ, ರಾಷ್ಟ್ರಪತಿ ಪಟ್ಟ ಬೇಡ: ಮೋಹನ್ ಭಾಗವತ್