ಮಡಿಕೇರಿ: ಯೇಸು ಕ್ರಿಸ್ತ ಸಾಯುವ ಮುನ್ನ ಅನುಭವಿಸಿದ ನೋವು, ಯಾತನೆಯ ಜೀವಂತ ದೃಶ್ಯ ರೂಪಕವನ್ನು ಕಂಡು ಕ್ರೈಸ್ತ ಧರ್ಮದ ಜನರು ಕಣ್ಣೀರು ಹಾಕಿದ ಘಟನೆ ಸೋಮವಾರಪೇಟೆ ತಾಲೂಕಿನ ಗೋಪುರದ ಗ್ರಾಮದಲ್ಲಿ ನಡೆದಿದೆ.
ಗೋಪಾಲಪುರ ಸಂತ ಅಂತೋಣಿ ಚರ್ಚ್‍ನಲ್ಲಿ ಗುಡ್ ಫ್ರೈಡೆ(ಶುಭ ಶುಕ್ರವಾರ) ಅಂಗವಾಗಿ ಕ್ರೈಸ್ತ ಭಕ್ತರು ಉಪವಾಸವೆಂದು ಶ್ರದ್ಧೆ ಭಕ್ತಿಯಿಂದ ಗೋಪಾಲಪುರದ ಚರ್ಚ್‍ಗೆ ಆಗಮಿಸಿದ್ದರು. ಈ ವೇಳೆ ಗೋಪಾಲಪುರ ಚರ್ಚ್‍ನ ಹಿಂದೆ ಇರುವ ಶಿಲುಬೆ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಮಯದಲ್ಲಿ ಫಾದರ್ ಜಾಕಬ್ ಕೊಳನೂರು ಅವರು ಪ್ರಾರ್ಥನೆಯ ವಿಧಿ ವಿಧಾನಗಳು ಸಲ್ಲಿಸಿದರು. ಇದನ್ನೂ ಓದಿ: ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಇಲ್ಲಿ ಇರಬಾರದು: ಅದಮಾರು ಶ್ರೀ
ಇದೇ ಸಂದರ್ಭದಲ್ಲಿ ಗೋಪಾಲಪುರ ಚರ್ಚ್‍ನ ಯುವತಂಡ, ಶಿಲುಬೆಯ ಹಾದಿಯಲ್ಲಿ ಯೇಸು ಅನುಭವಿಸಿದ ಯಾತನೆ ಹಾಗೂ ಮರಣದ ಬಗ್ಗೆ ನೈಜತೆಯಿಂದ ದೃಶ್ಯ ವೃತ್ತಾಂತವನ್ನು ಅಭಿನಯಿಸಿದ ಹಿನ್ನೆಲೆಯಲ್ಲಿ ಚರ್ಚ್‍ಗೆ ಬಂದ ಭಕ್ತರು ಅಂದಿನ ದಿನಗಳಲ್ಲಿ ಯೇಸು ಕ್ರೈಸ್ತ ಅನುಭವಿಸಿದ ನೋವುಗಳನ್ನು ನೋಡಿ ಕಣ್ಣೀರು ಹಾಕಿದ್ರು.
ವಿಭಿನ್ನವಾಗಿ ದೃಶ್ಯ ರೂಪಕ ಪ್ರಸ್ತುತ ಪಡಿಸಿದವರನ್ನು ಮನಸೂರೆಗೊಳ್ಳಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಚರ್ಚ್‍ನ ಫಾದರ್ ಜಾಕಬ್ ಕೊಳನೂರು ಎಲ್ಲರಿಗೂ ಆಶೀರ್ವಚನ ನೀಡಿದರು. ಇದನ್ನೂ ಓದಿ: ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ