ನವದೆಹಲಿ: ರಷ್ಯಾದ ಬಳಿಕ ಭಾರತ ಕ್ಯೂಬಾದ ಜೊತೆ ರೂಪಾಯಿ ಅಥವಾ ಯುರೋದಲ್ಲಿ ವ್ಯವಹಾರ ನಡೆಸುವ ಸಾಧ್ಯತೆಯಿದೆ.
ಈ ವಿಚಾರದ ಸಂಬಂಧ ಕ್ಯೂಬಾದ ಕೇಂದ್ರೀಯ ಬ್ಯಾಂಕ್ ಅಧಿಕಾರಿಗಳು ಆರ್‌ಬಿಐ ಜೊತೆ ಸಭೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಜೊತೆಗೂ ಮಾತುಕತೆ ನಡೆಸಿದ್ದಾರೆ.
Advertisement
ಕಳೆದ ವಾರ ಕ್ಯೂಬಾದ ಬ್ಯಾಂಕ್ ಅಧಿಕಾರಿಗಳು ಮೂರು ದಿನಗಳ ಪ್ರವಾಸದ ವೇಳೆ ಮುಂಬೈಯಲ್ಲಿ ಭಾರತದ ಬ್ಯಾಂಕುಗಳ ಜೊತೆ ಸಭೆ ನಡೆಸಿದ್ದಾರೆ. ಎರಡು ದೇಶಗಳ ಮಧ್ಯೆ ರುಪಿ ಪಾವತಿ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಈ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಅಗ್ಗದ ದರದಲ್ಲಿ ಎಲ್‌ಎನ್‌ಜಿ ಖರೀದಿಸಿದ ಭಾರತ
Advertisement
Advertisement
ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಆರ್ಥಿಕ ನಿರ್ಬಂಧ ಹೇರಿದ ಬಳಿಕ ಆರ್‌ಬಿಐ ಜುಲೈ 11 ರಿಂದ ರುಪಿ ಪಾವತಿಗೆ ಅನುಮತಿ ನೀಡಿದೆ.
Advertisement
ಕ್ಯೂಬಾ ಮತ್ತು ಭಾರತದ ಮಧ್ಯೆ ಉತ್ತಮ ವ್ಯಾಪಾರ ಸಂಬಂಧವಿದೆ. 2022ರ ಹಣಕಾಸು ವರ್ಷದಲ್ಲಿ ಭಾರತ 26.56 ದಶಲಕ್ಷ ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದರೆ ಕ್ಯೂಬಾದಿಂದ ಭಾರತ 1 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿದೆ.
ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಭಾರತ 4 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದರೆ ಕ್ಯೂಬಾದಿಂದ 0.6 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿದೆ.
ತನ್ನ ದೇಶದ ಕರೆನ್ಸಿ ಪೆಸೋಗೆ ಜಾಗತಿಕ ಮನ್ನಣೆ ಇಲ್ಲದಿರುವ ಕಾರಣ ಯುರೋದಲ್ಲಿ ವ್ಯವಹಾರ ನಡೆಸಲು ಒಪ್ಪಿಗೆ ಇದೆ ಎಂದು ಕ್ಯೂಬಾ ತಿಳಿಸಿದೆ.
Live Tv
[brid partner=56869869 player=32851 video=960834 autoplay=true]