ಮೈಸೂರು: ಪ್ರವಾಹದಲ್ಲಿ ಸಂಭವಿಸಿದ ನಷ್ಟದ ವರದಿ ಬಂದ ಮೇಲೆ ಕೇಂದ್ರಕ್ಕೆ ಪರಿಹಾರ ಕೇಳುವ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನೆರೆ ಪ್ರವಾಹ ಪ್ರದೇಶಗಳಿಗೆ ಭೇಟಿ ಕೊಡುತ್ತಿರುವ ಬೊಮ್ಮಾಯಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಡೀ ರಾಜ್ಯ ಸರ್ಕಾರ ರಸ್ತೆಗಿಳಿದು ಕೆಲಸ ಮಾಡುತ್ತಿದೆ. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ-ತಮ್ಮ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನೆರೆ ಹಾನಿ ಪ್ರದೇಶಕ್ಕೆ ಹೋಗುತ್ತಿಲ್ಲ ಎಂಬುದು ಸುಳ್ಳು. ನನ್ನ ಹಾದಿಯಾಗಿ ಎಲ್ಲ ಸಚಿವರುಗಳು ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಸಂಸದರ ಬೇಡಿಕೆಗೆ ಮಣಿದ್ರಾ ಉದ್ಧವ್?
Advertisement
Advertisement
ರಾಜ್ಯದಲ್ಲಿ ನೆರೆ ಹಾನಿ ವಿಚಾರ, ಇಂದು ಸಂಜೆಯೊಳಗಡೆ ಮೊದಲ ಹಂತದ ನಷ್ಟದ ಅಧಿಕೃತ ಅಂಕಿ ಅಂಶ ಬಿಡುಗಡೆ ಮಾಡಲಾಗುತ್ತೆ. ನಷ್ಟದ ವರದಿ ಬಂದ ಮೇಲೆ ಕೇಂದ್ರಕ್ಕೆ ಪರಿಹಾರ ಕೇಳುವ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ 750 ಕೋಟಿ ರೂ. ಎನ್‍ಡಿಆರ್‌ಎಫ್ ಹಣ ನಮ್ಮಲ್ಲಿ ಇದೆ ಎಂದು ತಿಳಿಸಿದರು.
Advertisement
ಅನೇಕ ಕಡೆಗಳಲ್ಲಿ ಭೂ ಕುಸಿತವಾಗಿದೆ. ರಸ್ತೆಗಳು ಹಾಳಾಗಿದೆ, ಮನೆ ಹಾನಿ, ಪ್ರಾಣ ಹಾನಿಯೂ ಉಂಟಾಗಿದೆ. ಎಲ್ಲದರ ಬಗ್ಗೆ ವರದಿ ಸಿದ್ಧವಾಗುತ್ತಿದೆ. ಸಂಜೆಯೊಳಗಡೆ ಅಧಿಕೃತ ಮಾಹಿತಿ ಪ್ರಕಟವಾಗುತ್ತೆ ಎಂದರು.
Advertisement
ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಉತ್ತರಿಸಿದ ಅವರು, ಆರು ತಿಂಗಳ ಹಿಂದೆಯೇ ಅಧ್ಯಕ್ಷರ ಬದಲಾವಣೆಗೆ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ. ಒಂದುವರೆ ವರ್ಷ ಪೂರೈಸಿರುವ ಅಧ್ಯಕ್ಷರುಗಳು ರಾಜೀನಾಮೆ ಸೂಚನೆ ನೀಡಿದ್ದೇವೆ. ಒಂದುವರೆ ವರ್ಷ ಅಧಿಕಾರ ಪೂರೈಸಿರುವವರ ಪಟ್ಟಿ ತಯಾರಿಸಿದ್ದೇವೆ. ಶೀಘ್ರದಲ್ಲೇ ಅದರ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಉದಯಪುರ ಹತ್ಯೆ ಬಗ್ಗೆ ಪೋಸ್ಟ್ – ಬಾಲಕಿಗೆ ಕೊಲೆ, ಅತ್ಯಾಚಾರ ಬೆದರಿಕೆ ಹಾಕಿದ ಜಮ್ಮು, ಕಾಶ್ಮೀರದ ವ್ಯಕ್ತಿ
ಬೆಂಗಳೂರಿನ ಚಾಮರಾಜಪೇಟೆ ಬಂದ್ ವಿಚಾರವನ್ನು ಸ್ಥಳೀಯ ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ ಎಂದರು.