Bengaluru City
ಪವರ್ ಮಿನಿಸ್ಟರ್‍ಗೆ ಮತ್ತೆ ಪವರ್ ಫುಲ್ ಶಾಕ್

ಬೆಂಗಳೂರು: ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ಇಡಿ ಕುಟುಂಬವೇ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ಜಾರಿ ಮಾಡಿದೆ.
ವಿಚಾರಣೆ ವೇಳೆ ಯಾವುದೇ ಕಾರಣಕ್ಕೂ ನಿಮ್ಮ ಲೆಕ್ಕ ಪರಿಶೋಧಕರನ್ನ ಕರೆತರಬಾರದು. ಕೇವಲ ನೀವು, ನಿಮ್ಮ ಪತ್ನಿ, ಸಹೋದರ, ಮಕ್ಕಳು ಮಾತ್ರ ವಿಚಾರಣೆಗೆ ಬರಬೇಕು ಎಂದು ಷರತ್ತು ವಿಧಿಸಿ ಶನಿವಾರ ಬೆಳಗ್ಗೆ ಐಟಿ ಇಲಾಖೆಯಿಂದ ಡಿಕೆಶಿಗೆ ನೋಟಿಸ್ ಜಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಲ್ಲಿ ಬೇನಾಮಿ ಆಸ್ತಿ ಮಾಡಿರುವ ನಾಯಕರ ಸಂಖ್ಯೆ ಜಾಸ್ತಿ ಸಂಖ್ಯೆಯಲ್ಲಿದೆ. ಈ ಎಲ್ಲ ನಾಯಕರಿಗೆ ಬಿಸಿ ಮುಟ್ಟಿಸದೇ ಬಿಡುವುದಿಲ್ಲ ಎಂದು ಮೋದಿ ಹೇಳಿಕೆ ಕೊಟ್ಟ 24 ಗಂಟೆಯ ಒಳಗಡೆ ಐಟಿ ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ.
ಆಗಸ್ಟ್ 2 ರಂದು ಡಿಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಮೇಲೂ ದಾಳಿ ನಡೆದಿತ್ತು.
ಇದನ್ನೂ ಓದಿ: ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?
https://www.youtube.com/watch?v=1hWVXuy2xRs
