ಕೇಪ್‍ಟೌನ್: ರಾಣಿ ಎಲಿಜಬೆತ್ (Queen Elizabeth) ನಿಧನದ ಬೆನ್ನಲ್ಲೇ ಬ್ರಿಟಿಷ್ ಕಿರೀಟದ ಆಭರಣಗಳಲ್ಲಿರುವ ಕೊಹಿನೂರ್ (Kohinoor) ವಜ್ರವನ್ನು ವಾಪಸ್ ನೀಡುವಂತೆ ಈಗಾಗಲೇ ಭಾರತದಲ್ಲಿ (India) ಅನೇಕರು ಒತ್ತಾಯಿಸಿದ್ದರು. ಆದರೆ ಇದೀಗ ರಾಣಿ ಕಿರೀಟದಲ್ಲಿರುವ ಇನ್ನೊಂದು ಪ್ರಮುಖ ವಜ್ರವನ್ನು ಮರಳಿ ನೀಡುವಂತೆ ದಕ್ಷಿಣ ಆಫ್ರಿಕಾ (South Africa) ಒತ್ತಾಯಿಸಿದೆ.
ರಾಣಿ ಎಲಿಜಬೆತ್ 2ರ ಮರಣದ ನಂತರ, ಆಕೆಯ ಮಗ ಪ್ರಿನ್ಸ್ ಚಾಲ್ಸ್ ಬ್ರಿಟನ್ ರಾಜ ಸಿಂಹಾಸನ ಅಲಂಕರಿಸಿದ್ದು, ಈಗ 105-ಕ್ಯಾರೆಟ್ ಕೊಹಿನೂರು ವಜ್ರ ಹಾಗೂ 530.2 ಕ್ಯಾರೆಟ್ ಇರುವ ಗ್ರೇಟ್ ಸ್ಟಾರ್ ವಜ್ರ (Great Star Diamond ) ಇರುವ ಕಿರೀಟ ಅವರ ಪತ್ನಿಯಾದ ರಾಣಿ ಕ್ಯಾಮಿಲ್ಲಾಗೆ ಹೋಗುತ್ತದೆ. ಈ ಕಿರೀಟದಲ್ಲಿರುವ ವಜ್ರವನ್ನು ವಾಪಸ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬರುತ್ತಿದೆ.
Advertisement
Advertisement
1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಸಂದರ್ಭದಲ್ಲಿ ಗ್ರೇಟ್ ಸ್ಟಾರ್ ವಜ್ರ ಸಿಕ್ಕಿತ್ತು. ಇದು ವಿಶ್ವದ ದೊಡ್ಡ ವಜ್ರ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಈ ಗ್ರೇಟ್ ಸ್ಟಾರ್ ಅನ್ನು ಆಫ್ರಿಕಾದ ವಸಾಹತುಶಾಹಿ ಆಡಳಿತಗಾರರು ಬ್ರಿಟಿಷ್ ರಾಜಮನೆತನಕ್ಕೆ ಹಸ್ತಾಂತರಿಸಿದ್ದರು. ಪ್ರಸ್ತುತ ಈ ವಜ್ರವು ರಾಣಿಗೆ ಸೇರಿದ ಕಿರೀಟದಲ್ಲಿ ಅಳವಡಿಸಲಾಗಿದೆ. ಇದನ್ನೂ ಓದಿ: ರಸ್ತೆಗಾಗಿ ದಶಕಗಳಿಂದ ಹೋರಾಟ – ಆಸ್ಪತ್ರೆಗೆ ದಾಖಲಿಸಲು ವದ್ಧೆಯನ್ನು ಜೋಳಿಗೆಯಲ್ಲೇ ಹೊತ್ತೊಯ್ದರು
Advertisement
ರಾಣಿ ಎಲಿಜಬೆತ್ ನಿಧನದ ಬೆನ್ನಲ್ಲೇ ವಜ್ರವನ್ನು ಹಿಂದಿರುಗಿಸುವಂತೆ change.orgನಲ್ಲಿ ಆನ್‍ಲೈನ್ ಅಭಿಯಾನ ಪ್ರಾರಂಭವಾಗಿದೆ. ಅದಕ್ಕೆ 6,000ಕ್ಕೂ ಹೆಚ್ಚು ಜನರು ಈಗಾಗಲೇ ಸಹಿ ಹಾಕಿದ್ದಾರೆ. ಕಲ್ಲಿನನ್ ವಜ್ರವನ್ನು ತಕ್ಷಣವೇ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿಸಬೇಕು. ಜೊತೆಗೆ ನಮ್ಮ ದೇಶದ ಮತ್ತು ಇತರ ದೇಶಗಳ ಖನಿಜಗಳು ಅವರವರ ದೇಶಕ್ಕೆ ವಾಪಸ್ ನೀಡಬೇಕು ಎಂದರು.
Advertisement
ದಕ್ಷಿಣ ಆಫ್ರಿಕಾದ ಸಂಸತ್ತಿನ ಸದಸ್ಯರಾದ ವುಯೋಲ್ವೆತು ಝುಂಗುಲಾ ಅವರು ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಬ್ರಿಟನ್ ಮಾಡಿದ ಎಲ್ಲಾ ಹಾನಿಗಳಿಗೆ ಪರಿಹಾರ ಹಾಗೂ ಬ್ರಿಟನ್ ಕದ್ದ ಎಲ್ಲಾ ಚಿನ್ನ, ವಜ್ರಗಳನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಲಂಡನ್ ಟವರ್‍ನಲ್ಲಿರುವ ಜ್ಯುವೆಲ್ ಹೌಸ್‍ನಲ್ಲಿ ವಜ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ