ಮೋದಿ ಉತ್ತರಾಧಿಕಾರಿ ಯಾರು? ಅಮಿತ್‌ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?

Public TV
2 Min Read
MODI AMITH SHA JP NADDA GADKARI SANTOSH

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಉತ್ತರಾಧಿಕಾರಿ ಯಾರು? ಬಿಜೆಪಿ ಪಾಳೆಯದ ಈ ಪ್ರಶ್ನೆಗೆ ಸದ್ಯ ಕಮಲ ನಾಯಕರಲ್ಲಿ ಉತ್ತರ ಇಲ್ಲ. ಅಮಿತ್‌ ಶಾ, ಯೋಗಿ ಅದಿತ್ಯನಾಥ್‌ ಹೆಸರು ಮುಂಚೂಣಿಯಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ನಿಟ್ಟಿನಲ್ಲಿ ವಾಹಿನಿಯೊಂದು ಸಮೀಕ್ಷೆ ನಡೆಸಿ ಉತ್ತರ ಕಂಡುಕೊಳ್ಳುವ ಕೆಲಸ ಮಾಡಿದೆ.

ಇಂಡಿಯಾ ಟುಡೇ ಟುಡೇ 543 ಲೋಕಸಭಾ ಕ್ಷೇತ್ರಗಳಲ್ಲಿ(Lok Sabha Constituency) 40,591 ಜನರನ್ನು ಸಂದರ್ಶಿಸಿ ಮೂಡ್ ಆಫ್ ನೇಷನ್ ಸಮೀಕ್ಷೆ ಕೈಗೊಂಡಿದೆ. ಸದ್ಯ ಮೋದಿ ಕ್ಯಾಬಿನೆಟ್‌ನಲ್ಲಿ ನಂಬರ್‌ 2 ಆಗಿರುವ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಉತ್ತರಾಧಿಕಾರಿಯಾಗಲು ಸೂಕ್ತ ವ್ಯಕ್ತಿ ಎಂದು ಹೆಚ್ಚಿನ ಜನ ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಇದ್ದರೆ, ಮೂರನೇ ಸ್ಥಾನದಲ್ಲಿ ಭೂ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಇದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅನುಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ನಿಮ್ಮ ಜಗಳದಿಂದ ಸರ್ಕಾರ ಅಸ್ಥಿರಗೊಂಡರೆ ಅದಕ್ಕೂ ನಮಗೆ ಸಂಬಂಧವಿಲ್ಲ: ಜೋಷಿ ಕಿಡಿ

narendra modi jp nadda amit shah bl santosh bjp meeting

ಯಾರಿಗೆ ಎಷ್ಟು ಒಲವು?
ಅಮಿತ್‌ ಶಾ 25%, ಯೋಗಿ ಅದಿತ್ಯನಾಥ್‌ 19%, ಗಡ್ಕರಿ 13% ಜನ ಬೆಂಬಲಿಸಿದ್ದಾರೆ. ರಾಜನಾಥ್‌ ಸಿಂಗ್‌ ಮತ್ತು ಶಿವರಾಜ್‌ ಚೌಹಾಣ್‌ ಅವರಿಗೆ 5% ಜನ ಬೆಂಬಲ ನೀಡಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಮುಂದಿನ ಸೆಪ್ಟೆಂಬರ್‌ನಲ್ಲೂ 75 ವರ್ಷ ತುಂಬುತ್ತದೆ. 75 ವರ್ಷ ಮೀರಿದವರು ಅಧಿಕಾರದಲ್ಲಿ ಇರಬಾರದು. ಅವರು ಕಿರಿಯರಿಗೆ ಅವಕಾಶ ನೀಡಬೇಕು. 75 ವರ್ಷ ಮೀರಿದವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬ ಮಾನದಂಡವನ್ನು ಬಿಜೆಪಿ ಹಿಂದೆ ಹಾಕಿಕೊಂಡಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಈ ಮಾನದಂಡ ವಿಫಲವಾದ ಬೆನ್ನಲ್ಲೇ ನಂತರದ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್‌ ಹಂಚಿಕೆಗೆ ಈ ನಿಯಮಗಳು ಅನ್ವಯವಾಗಲಿಲ್ಲ.

narendra modi jp nadda amit sha

 

ಮೋದಿ ಅವರು ಗುಜರಾತ್‌ನಲ್ಲಿ 2001 ರಿಂದ 2014 ರವರೆಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. 2012ರ ವಿಧಾನಸಭಾ ಚುನಾವಣೆ ಮೋದಿ ಅವರಿಗೆ ನಿರ್ಣಯಕವಾಗಿತ್ತು. ಈ ಚುನಾವಣೆ ಗೆದ್ದ ಬಳಿಕ ಮೋದಿ ಅವರ ಹೆಸರು ರಾಷ್ಟ್ರ ರಾಜಕಾರಣಕ್ಕೆ ಬಂದಿತ್ತು.  ಇದನ್ನೂ ಓದಿ: Renukaswamy Case | ಪ್ರಮುಖ ಸಾಕ್ಷಿ, ಹಾಸ್ಯ ನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ!

ಯೋಗಿ ಅದಿತ್ಯನಾಥ್‌ ಅವರು ಸತತ ಎರಡು ಬಾರಿ ಉತ್ತರ ಪ್ರದೇಶ ಚುನಾವಣೆ ಗೆದ್ದಿದ್ದಾರೆ. 2027 ರಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಈ ಬಾರಿಯ ಲೋಕಸಭಾ ಚುನಾವಣೆ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 2027ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಯೋಗಿ ಅದಿತ್ಯನಾಥ್‌ ಅವರು ವರ್ಚಸ್ಸು ವೃದ್ಧಿಯಾಗುವ ಸಾಧ್ಯತೆಯಿದೆ.

 

Share This Article