ಹುಬ್ಬಳ್ಳಿ: ಇದುವರೆಗೆ ಪ್ಲಾಸ್ಟಿಕ್ ಸಕ್ಕರೆ, ಪ್ಲಾಸ್ಟಿಕ್ ಅಕ್ಕಿ ಹಾಗೂ ಪ್ಲಾಸ್ಟಿಕ್ ಮೊಟ್ಟೆಗಳ ಬಗ್ಗೆ ಕೇಳಿದ್ವಿ. ಆದರೆ, ಅಗ್ಗದ ದರದಲ್ಲಿ ಎಂದರೆ ಕೇವಲ ಒಂದು ರೂಪಾಯಿಗೆ ಸಿಗೋ, ಮಕ್ಕಳು ಬಲು ಇಷ್ಟಪಟ್ಟು ತಿನ್ನೊ ಪಾಪಡಿಗಳೂ ಪ್ಲಾಸ್ಟಿಕ್ ನಿಂದ ತಯಾರಾಗುತ್ತಿದ್ಯಾ ಎನ್ನುವ ಅನುಮಾನ ಕಾಡುತ್ತಿದೆ.
ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಸಿಗುವ ಈ ಪಾಪಡಿಯನ್ನು ಸುಟ್ಟರೆ ದಟ್ಟ ಕಪ್ಪು ಹೊಗೆ ಬರುತ್ತೆ. ಜೊತೆಗೆ ಈ ಪಾಪಡಿ ಸುಡುವಾಗ ಪ್ಲಾಸ್ಟಿಕ್ ಸುಟ್ಟ ಹಾಗೆ ವಾಸನೆಯೂ ಬರುತ್ತೆ. ಹೀಗಾಗಿ ಇದು ಪ್ಲಾಸ್ಟಿಕ್ ನಿಂದ ತಯಾರಿಸಿದ ಪಾಪಡ್ ಎನ್ನುವ ಅನುಮಾನ ಜನರಲ್ಲಿ ಮೂಡಿದೆ.
Advertisement
Advertisement
ಈ ಹಿಂದೆ ಪ್ಲಾಸ್ಟಿಕ್ ನ ಕೆಲ ಆಹಾರ ಪದಾರ್ಥಗಳು ಮಾರಾಟವಾಗುತ್ತಿರುವ ಬಗ್ಗೆ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಪ್ಲಾಸ್ಟಿಕ್‍ನ ಆಹಾರ ಪದಾರ್ಥವೊಂದು ಬೆಳಕಿಗೆ ಬಂದಿದ್ದು, ಇದರಲ್ಲಿಯೂ ಕೂಡಾ ಪ್ಲಾಸ್ಟಿಕ್ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ರೀತಿಯ ಉದ್ದದ ಪಾಪಡ್ ಗಳನ್ನು ನಗರದಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಶಾಲೆಗಳ ಅಕ್ಕ ಪಕ್ಕದಲ್ಲಿ ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದೆ.
Advertisement
Advertisement
ಸಾಮಾನ್ಯ ಪಾಪಡಿಗಳಿಗಿಂತ ಈ ಪಾಪಡ್ ಗಳು ನೋಡಲು ಹಾಗೂ ತಿನ್ನಲು ವಿಭಿನ್ನವಾಗಿದ್ದು, ತಿಂದರೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆಯಂತೆ. ಇನ್ನು ಇವುಗಳಿಗೆ ಬೆಂಕಿ ಹಚ್ಚಿದರೆ ಪ್ಲಾಸ್ಟಿಕ್ ಹಾಗೇ ಉರಿಯುತ್ತವೆ. ಜೊತೆಗೆ ಕೊನೆಯಲ್ಲಿ ಕೆಲ ತ್ಯಾಜ್ಯ ವಸ್ತುಗಳು ಉಳಿಯುತ್ತವೆ. ಹೀಗಾಗಿ ಇದರಲ್ಲಿ ಪ್ಲಾಸ್ಟಿಕ್ ಇದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.