ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಅನ್ನಭಾಗ್ಯದಲ್ಲಿ ಕೊಟ್ಟ ಅಕ್ಕಿ ರಬ್ಬರ್ ಅಕ್ಕಿಯಾಗಿ ಪರಿವರ್ತನೆ ಆಗಿದ್ದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಪಡಿತರ ಅಂಗಡಿಯಿಂದ ತಂದ ಅನ್ನಭಾಗ್ಯದ ಅಕ್ಕಿ ರಬ್ಬರ್ ತುಣುಕುಗಳಾಗಿ ಪರಿವರ್ತನೆ ಕಂಡು ಧಗ ಧಗನೇ ಹೊತ್ತು ಉರಿದಿದೆ. ಅಲ್ಲದೇ ನೆನೆಸಿಟ್ಟ ಅಕ್ಕಿಯನ್ನು ರುಬ್ಬಿದಾಗ ಕೂಡ ರಬ್ಬರ್ ತುಣುಕುಗಳ ರೀತಿ ಮಾರ್ಪಾಡುಗೊಳ್ಳುತ್ತಿದೆ.
Advertisement
Advertisement
ಅನ್ನಭಾಗ್ಯ ಅಕ್ಕಿಯನ್ನೇ ಪ್ರತಿನಿತ್ಯ ಆಹಾರದಲ್ಲಿ ಬಳಸುತ್ತಿರುವ ಚೊಟ್ಟನಹಳ್ಳಿ ಗ್ರಾಮಸ್ಥರು ಇದ್ದನ್ನು ಕಂಡು ಆತಂಕ್ಕೊಳಗಾಗಿದ್ದಾರೆ. ಜೂನ್ ತಿಂಗಳಲ್ಲಿ ಗ್ರಾಮಸ್ಥರಿಗೆ ಪಡಿತರ ಅಕ್ಕಿ ನೀಡಲಾಗಿತ್ತು. ಈಗ ಪಡಿತರ ಅಂಗಡಿಯಲ್ಲಿ ರಬ್ಬರ್ ಅಕ್ಕಿ ನೀಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
Advertisement
ಸರ್ಕಾರವೇ ಈ ರೀತಿಯ ಅಕ್ಕಿ ನೀಡಿದರೆ ಬಡ ಜನರ ಜೀವದ ಕಥೆ ಏನು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.