ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಶನಿವಾರ ತಮ್ಮ ಪ್ರೀತಿ ಪಾತ್ರರನ್ನು ಅಗಲಿದ್ದಾರೆ. ಈಗಾಗಲೇ ಅಂಬಿಯ ಶ್ವಾನಗಳಾದ ಕನ್ವರ್ ಲಾಲ್ ಹಾಗೂ ಬುಲ್ ಬುಲ್ ಅಂಬಿಯನ್ನು ನೆನೆದು ಭಾವುಕರಾಗಿದ್ದು, ಇದೀಗ ಪ್ರೀತಿಯ ಕುದುರೆ ಜಾಕಿ ಕೂಡ ಅಂಬಿಯನ್ನು ನೆನೆದು ಭಾವುಕವಾಗಿದೆ.
ಅಂಬಿಗೆ ಕೊನೆಯ ರೇಸ್ ನೋಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಅಂಬಿ ಸಾವಿಗೂ ಮುನ್ನಾ ದಿನ ರೇಸ್ ನೋಡುವುದಕ್ಕೆ ಹೋಗಿದ್ದರು. ಮಳೆ ಇದ್ದಿದರಿಂದ ರೇಸ್ ಕ್ಯಾನ್ಸಲ್ ಆಗಿತ್ತು. ಆಗ ಅಂಬಿ ಬೇಸರ ಮಾಡಿಕೊಂಡು ಮನೆಗೆ ಹೋಗಿದ್ದರು. ಸಾವಿಗೂ ಮುನ್ನಾ ದಿನ ಅಂಬಿ ಪ್ರೀತಿಯ ಅಶ್ವದ ಬಗ್ಗೆಯೆಲ್ಲ ಮಾತನಾಡಿದ್ದರು.
Advertisement
ಅಂಬಿ “ಬಡ್ಡೇತದೆ” ಗೂ ವಯಸ್ಸಾಗಿದೆ. ಆದರೆ ಅಂಬಿಯದ್ದೇ ಚಾರ್ಮ್ ಇದೆ. ಅಂಬಿ, ಜಾಕಿ ಬಿಟ್ಟು ಬೇರೆ ಯಾರು ಹತ್ತಿರ ಬಂದ್ರೂ ಗುರ್ ಎನ್ನುತ್ತಿತ್ತು. ಜಾಕಿ ವಾರೆನ್ ಸಿಂಗ್ ಸ್ಪೀಡ್ ಹಾಕ್ ಅಂತಾ ಅಂಬಿ ಕುದುರೆಗೆ ಹೆಸರು ಇಟ್ಟಿದ್ದರು. ಆದರೆ ಅಂಬಿ ಮಾತ್ರ ಬಡ್ಡೇತದೆ ಅಂತಾ ಕುದುರೆಯ ಮೈದಡವಿ ಮಾತಾನಾಡಿಸುತ್ತಿದ್ದರು.
Advertisement
Advertisement
ಇಡೀ ರೇಸ್ ಕೋರ್ಸ್ ನಲ್ಲಿ ಅಂಬಿ ಕುದುರೆದ್ದೇ ಹವಾ. ಮೂಗಿನಲ್ಲಿ ಸಿಟ್ಟು, ಫೋಟೋ ಫೋಸ್ ಗೀಸು ಅಂತಾ ಹತ್ತಿರ ಬಂದರೆ ಗುರ್ ಎನ್ನುತ್ತದೆ. ಅಂಬಿ ಕಂಡರೆ ಮಾತ್ರ ತುಂಬಾ ಪ್ರೀತಿಯಿತ್ತು. ಅಂಬಿ ಕುದುರೆಗೆ ಏಳು ವರ್ಷ. ಆದರೂ ತುಂಬಾ ಚೆನ್ನಾಗಿ ರೇಸ್ ಮಾಡುತ್ತಿತ್ತು.
Advertisement
ಸಾಮಾನ್ಯವಾಗಿ ಮೂರು ವರ್ಷ ನಾಲ್ಕು ವರ್ಷಕ್ಕೆ ಕುದುರೆಗಳು ಬಹಳ ಸ್ಪೀಡಾಗಿ ಓಡುತ್ತೆ. ಆಮೇಲೆ ಐದು ವರ್ಷ ಆಗುತ್ತಿದ್ದಂತೆ ಸ್ಪೀಡ್ ಕಡಿಮೆಯಾಗುತ್ತೆ. ಆದರೆ ಅಂಬಿ ಕುದುರೆ ಮಾತ್ರ ವಯಸ್ಸಾದ್ರೂ ಚೆನ್ನಾಗಿ ರೇಸ್‍ನಲ್ಲಿ ಓಡುತ್ತಿತ್ತು. ಗಂಟೆಗೆ 60 ಕಿ.ಮಿ ಓಡುತ್ತಿತ್ತು. ಅಂಬಿ ಹಾಗೂ ಜಾಕಿ ಬಿಟ್ಟು ಯಾರೂ ಹತ್ತಿರ ಸುಳಿಯೋ ಹಾಗಿಲ್ಲ.
ಅಂಬಿಗೆ ಡರ್ಬಿನಲ್ಲಿ ದುಡ್ಡು, ನೇಮು, ಫೇಮು ತಂದುಕೊಟ್ಟಿದ್ದೆ ಈ ಬಡ್ಡೇತದೆ ಕುದುರೆ. ವಾರೇನ್ ಸಿಂಗ್ ಬಳಿ ಬಿಳಿ ಕುದುರೆ ಕಂಡರೆ ಅಂಬಿಗೆ ತುಂಬಾ ಇಷ್ಟ. ಅಂಬಿ ಕೊನೆಯದಾಗಿ ಈ ಬಿಳಿ ಕುದುರೆ “ಗ್ಲೋಬಲ್ ರೂಲರ್ ” ರೇಸ್ ನೋಡುವುದಕ್ಕೆ ಬಂದಿದ್ದರು. ಆದರೆ ಅಂದು ಮಳೆ ಇದ್ದಿದ್ದರಿಂದ ರೇಸ್ ಕ್ಯಾನ್ಸಲ್ ಆಗಿತ್ತು.
ಥತ್ ನಿನ್ನ ರೇಸ್ ನೋಡಬೇಕು ಅನ್ನೊಂಡ್ನಲ್ಲೋ ಮಳೆ ಬಂದು ಹಾಳಾಗೋಯ್ತು ಅಂತಾ ಅಂಬಿ ಬಿಳಿ ಕುದುರೆ ಮೈಸವರಿ ಮಳೆಗೊಂದಿಷ್ಟು ಬೈದು, ಹೋಗಿದ್ದರು. ಬಿಳಿ ಕುದುರೆ ಫುಲ್ ಕೂಲ್ ಆಗಿದ್ದರೆ, ಅಂಬಿ ಕುದುರೆ ರೆಬೆಲ್ ಆಗಿತ್ತು. ಈ ಎರಡು ಕುದುರೆಯೂ ಅಂಬಿಗೆ ತುಂಬಾ ಇಷ್ಟವಿತ್ತು. ಅಂಬಿ ಕುದುರೆ ಒಟ್ಟು 6 ಕಪ್‍ಗಳನ್ನು ಗೆದ್ದಿತ್ತು. ಒಟ್ಟಿನಲ್ಲಿ ಇದೀಗ ಇವುಗಳ ಮೂಕ ರೋಧನೆ ಕೂಡ ಅಂಬಿ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಅಸಾಧ್ಯವಾಗಿರುವುದನ್ನು ಗಮನಿಸಿಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv