ಪಾವಗಡ ಬಳಿಕ ಬೀದರ್‌ನಲ್ಲೂ ಖಾಸಗಿ ಬಸ್ ಪಲ್ಟಿ

Public TV
1 Min Read
bus bidar

ಬೀದರ್: ಇಂದು ಬೆಳಗ್ಗೆಯೇ ತುಮಕೂರಿನ ಪಾವಗಡದಲ್ಲಿ ಬಸ್ ಪಲ್ಟಿಯಾಗಿ 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಗಡಿಜಿಲ್ಲೆ ಬೀದರ್‌ನಲ್ಲೂ ಖಾಸಗಿ ಟ್ರಾವೇಲ್ಸ್ ಪಲ್ಟಿಯಾಗಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

bus bidar 1

ಬೆಂಗಳೂರಿನಿಂದ ಬೀದರ್‌ಗೆ ಬರುತ್ತಿದ್ದ ಖಾಸಗಿ ಟ್ರಾವೇಲ್ಸ್ ಬಸ್‍ಗೆ ಬೈಕ್ ಸವಾರ ಅಡ್ಡ ಬಂದಿದ್ದಾನೆ. ಈ ಹಿನ್ನೆಲೆ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಪಿಯಾಗಿದೆ. ಖಾಸಗಿ ಬಸ್‍ನಲ್ಲಿದ್ದ ಸುಮಾರು 6 ಮಂದಿಗೆ ಗಂಭೀರ ಗಾಯವಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಇದನ್ನೂ ಓದಿ: ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

bus bidar 3

ಈ ಘಟನೆ ಬೀದರ್ ತಾಲೂಕಿನ ಅಣದೂರು ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ ಪಲ್ಟಿಯಾದ ಪರಿಣಾಮ ರಸ್ತೆ ಪಕ್ಕ ಬಿದ್ದಿತ್ತು. ಚಿಂತಾಜನಕವಾದ ಪ್ರಯಾಣಿಕರನ್ನು ಸ್ಥಳೀಯರ ಸಹಾಯದಿಂದ ಬ್ರೀಮ್ಸ್ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

bus bidar 2

ಸುದ್ದಿ ತಿಳಿದ ಪ್ರಯಾಣಿಕರ ಸಂಬಂಧಿಗಳು ಬ್ರೀಮ್ಸ್ ಆಸ್ಪತ್ರೆಗೆ ಹೋಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಮಾಹಿತಿಯನ್ನು ಸ್ಥಳೀಯರು ಜನವಾಡ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಸ್ತುತ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ‘ಅಸನಿ’ ಚಂಡಮಾರುತ

Share This Article
Leave a Comment

Leave a Reply

Your email address will not be published. Required fields are marked *