Special- ‘ಆಸ್ಕರ್’ ಬೆನ್ನಲ್ಲೇ ಮತ್ತೆ 50 ಲಕ್ಷ ಜನ ‘ನಾಟು ನಾಟು’ ವೀಡಿಯೋ ನೋಡಿದ್ರು

Public TV
2 Min Read
rrr 1

ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ‘ಆರ್.ಆರ್.ಆರ್’ (R.R.R) ಸಿನಿಮಾದ ‘ನಾಟು ನಾಟು’ (Natu Natu) ಹಾಡಿಗೆ ಆಸ್ಕರ್ (Oscar) ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಈ ಹಾಡನ್ನು ನೋಡಿದವರ ಸಂಖ್ಯೆ 50 ಲಕ್ಷ ದಾಟಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಿಗರು ಕೂಡ ಈ ಹಾಡನ್ನು ಹುಡುಕಿ ವೀಕ್ಷಿಸಿದ್ದಾರೆ. ಕಳೆದ ನಲವತ್ತೆಂಟು ಗಂಟೆಯಲ್ಲಿ 55 ಲಕ್ಷಕ್ಕೂ ಹೆಚ್ಚು ಜನರು ಈ ಹಾಡನ್ನು ವೀಕ್ಷಿಸಿದ್ದರೆ, 24 ಗಂಟೆಯಲ್ಲಿ 35 ಲಕ್ಷಕ್ಕೂ ಹೆಚ್ಚು ಜನರು ಈ ಹಾಡನ್ನು ಕಣ್ತುಂಬಿಕೊಂಡಿದ್ದಾರೆ.

rrr

ನಿನ್ನೆ ಬೆಳಗ್ಗೆ (ಮಾರ್ಚ್ 13) ಲಹರಿ ಚಾನೆಲ್ (Lahari Music) ನಲ್ಲಿ 125 ಮಿಲಿಯನ್ ವೀಕ್ಷಣೆ ಇತ್ತು. ಈಗಿನವರೆಗೆ 128 ಮಿಲಿಯನ್ ಆಗಿದೆ. ಈ ಕುರಿತು ಮಾಹಿತಿಯನ್ನು ಹಂಚಿಕೊಂಡ ಲಹರಿ ಸಂಸ್ಥೆಯ ವೇಲು, ‘ನಾಟು ನಾಟು ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿದೆ. ಟಿ ಸೀರಿಸ್ ಮತ್ತು ಲಹರಿ ಮ್ಯೂಸಿಕ್ ಎರಡರಲ್ಲೂ ಹಾಡನ್ನು ವೀಕ್ಷಿಸಬಹುದಾಗಿದೆ. ಅತೀ ಹೆಚ್ಚು ತೆಲುಗಿನಲ್ಲೇ ಈ ಹಾಡನ್ನು ನೋಡಿದ್ದಾರೆ. ಗ್ಲೋಡನ್ ಗ್ಲೋಬ್ ಪ್ರಶಸ್ತಿ ಬಂದಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಡನ್ನು ವೀಕ್ಷಿಸಿದ್ದರು. ಆಸ್ಕರ್ ಬಂದ ನಂತರವೂ ನೋಡಿದ್ದಾರೆ’ ಎನ್ನುತ್ತಾರೆ. ಇದನ್ನೂ ಓದಿ: ಪುನೀತ್ ಜನ್ಮ ದಿನದಂದು ಓಟಿಟಿಯಲ್ಲಿ ‘ಗಂಧದ ಗುಡಿ’

rrr 1

ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲೂ ಅದು ಟ್ರೆಂಡ್ ಸೃಷ್ಟಿಸಿದೆ. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಸಿನಿಮಾದ ಗೀತೆ ಇದಾಗಿದ್ದು,  ಎಂ.ಎಂ.ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದರೆ, ಈ ಹಾಡಿನ ಮ್ಯೂಸಿಕ್ ಹಕ್ಕನ್ನು ಕನ್ನಡದ ಹೆಮ್ಮೆಯ ಲಹರಿ ಸಂಸ್ಥೆ ಪಡೆದುಕೊಂಡಿದೆ.

RRR 2

ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದ್ದು, ಮೂಲ ಚಿತ್ರಸಾಹಿತ್ಯವನ್ನು ಚಂದ್ರಬೋಸ್ ಬರೆದಿದ್ದಾರೆ. ಕಲಾಭೈರವ ಹಾಗೂ ಸಿಪ್ಲಿಗಂಜ ಹಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಹಾಡು ಮೂಡಿ ಬಂದಿದೆ. ಇಂತಹ ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯು ಸಂದಿದೆ. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಚಿತ್ರದ ಈ ಹಾಡು ಆಸ್ಕರ್ ತರುವ ಭರವಸೆಯನ್ನೂ ಮೂಡಿಸಿತ್ತು. ಆಸ್ಕರ್ ವೇದಿಕೆಯ ಮೇಲೆ ಈ ಹಾಡನ್ನು ಗಾಯಕರಾದ ಸಿಪ್ಲಿಗಂಜ ಹಾಗೂ ಕಾಲಭೈರವ ಹಾಡಿದ್ದರು. ಅಮೆರಿಕಾದ ನಟ, ಡಾನ್ಸರ್ ಲಾರೆನ್ ಗೋತ್ಲಿಬ್ ನೃತ್ಯ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *