ಮಂಡ್ಯ: ನೂತನವಾಗಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದ್ದು, ಉದ್ಘಾಟನೆಯಾದ ಒಂದೇ ಗಂಟೆಯಲ್ಲಿ ಊಟ ಖಾಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸಂಜಯ ವೃತ್ತದಲ್ಲಿರುವ ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದೆ. ಆದ್ದರಿಂದ ಇಂದು ಉಚಿತವಾಗಿ ಊಟ ನೀಡಲಾಗುತ್ತಿತ್ತು. ಕ್ಯಾಂಟೀನ್ ಬಳಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಊಟ ಸ್ವೀಕರಿಸುತ್ತಿದ್ದರು. ಆದರೆ ಕ್ಯಾಂಟೀನ್ ಶುರುವಾರ ಕೇವಲ ಒಂದೇ ಗಂಟೆಯಲ್ಲಿ ಊಟ ಖಾಲಿಯಾಗಿದೆ.
ಸಾರ್ವಜನಿಕರು ಕಡಿಮೆ ದುಡ್ಡಿಗೆ ಊಟ ಮಾಡಬಹುದೆಂದು ಕ್ಯಾಂಟೀನ್ ಗೆ ಬಂದಿದ್ದರು. ಆದರೆ ಕೇವಲ ಒಂದು ಗಂಟೆಯಲ್ಲಿ ಊಟ ಖಾಲಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ದಿನವೇ ಒಂದೇ ಒಂದು ಗಂಟೆ ಊಟ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.