ಮೆಲ್ಬರ್ನ್: ಕಳಪೆ ಪ್ರದರ್ಶನದ ಕಾರಣ ನೀಡಿ ನಿವೃತ್ತಿ ನೀಡುವಂತೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಟೀಕೆ ಮಾಡಿದ್ದವರಿಗೆ ಎಂಎಸ್‍ಡಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸುವ ಮೂಲಕ ಉತ್ತರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವ ಧೋನಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸಿ ವೃತ್ತಿ ಜೀವನದ 70ನೇ ಅರ್ಧ ಶತಕ ಪೂರೈಸಿದರು. ಉಳಿದಂತೆ ಮೊದಲ ಪಂದ್ಯದಲ್ಲಿ 96 ಎಸೆತಗಳಲ್ಲಿ 51 ರನ್, 2ನೇ ಪಂದ್ಯದಲ್ಲಿ 54 ಎಸೆತಗಳಲ್ಲಿ 55* ರನ್ ಹಾಗೂ 3ನೇ ಪಂದ್ಯದಲ್ಲಿ 114 ಎಸೆತಗಳಲ್ಲಿ 87* ರನ್ ಸಿಡಿಸಿದ್ದಾರೆ.
ಧೋನಿ ಈ ಹಿಂದೆ 2 ಬಾರಿ ಹ್ಯಾಟ್ರಿಕ್ ಅರ್ಧ ಶತಕ ಗಳಿಸಿದ ಸಾಧನೆ ಮಾಡಿದ್ದು, 2011 ಇಂಗ್ಲೆಂಡ್, 2014 ನ್ಯೂಜಿಲೆಂಡ್, ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧ ಶತಕ ಸಿಡಿಸಿದ್ದರು. ಉಳಿದಂತೆ 2018ರಲ್ಲಿ 13 ಇನ್ನಿಂಗ್ಸ್ ಗಳನ್ನು ಆಡಿದ್ದ ಧೋನಿ ಒಂದು ಅರ್ಧ ಶತಕ ಕೂಡ ಗಳಿಸಿರಲಿಲ್ಲ. ಅಲ್ಲದೇ 2018ರಲ್ಲಿ 20 ಏಕದಿನ ಪಂದ್ಯಗಳಿಂದ 275 ರನ್ ಮಾತ್ರ ಗಳಿಸಿದ್ದರು.
ಟೀಂ ಇಂಡಿಯಾ ಪರ ಧೋನಿ 6ನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಹಿಂದೆ ಸಚಿನ್ 14 ಬಾರಿ, ಯುವರಾಜ್ ಸಿಂಗ್ 7 ಬಾರಿ ಹಾಗೂ ಸೌರವ್ ಗಂಗೂಲಿ, ಕೊಹ್ಲಿ ತಲಾ 6 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
Eat.
Sleep.
Finish games.
Repeat.
Life as @msdhoni. ???? pic.twitter.com/5GXrzH0dtR
— ICC Cricket World Cup (@cricketworldcup) January 18, 2019
1 ಸಾವಿರ ರನ್: ಧೋನಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸೀಸ್ ವಿರುದ್ಧ ಏಕದಿನ ಮಾದರಿಯಲ್ಲಿ 1 ಸಾವಿರ ರನ್ ಪೂರೈಸಿದರು. ಈ ಮೂಲಕ ಸಚಿನ್, ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಈ ಸಾಧನೆ ಮಾಡಿದ ಭಾರತೀಯ ಆಟಗಾರ ಎನಿಸಿಕೊಂಡರು.
ನಂ.4: ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಧೋನಿ ಪರ ಬ್ಯಾಟ್ ಮಾಡಿದ್ದರು. ಈ ವೇಳೆ ಧೋನಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಅವಕಾಶ ನೀಡುವುದು ಉತ್ತಮ ಎಂದು ತಿಳಿಸಿದ್ದರು. ಈ ಕುರಿತು ಅರಿತ ನಾಯಕ ಕೊಹ್ಲಿ, ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ್ದರು. ಒಟ್ಟಾರೆ 2018ರ ವೈಫಲ್ಯಗಳ ಧೋನಿ ಬ್ಯಾಟಿಂಗ್‍ನಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.
Another Trophy in the cabinet. 2-1 ????????????????
Jai Hind #TeamIndia #AUSvIND pic.twitter.com/oq101deoed
— BCCI (@BCCI) January 18, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv