ಲಂಡನ್: 60 ವರ್ಷಗಳ ಹಿಂದೆ ಕಳ್ಳತನವಾಗಿದ್ದ ಪ್ರಾಚೀನ ಕಾಲದ ಕಂಚಿನ ಬುದ್ಧನ ಪ್ರತಿಮೆಯೊಂದು ಸ್ವಾತಂತ್ರ್ಯ ದಿನಾಚರಣೆಯಂದೇ ಭಾರತಕ್ಕೆ ಮರಳಿದೆ.
ಲಂಡನ್‍ನಲ್ಲಿ ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಈ ಪ್ರತಿಮೆಯನ್ನು ಜಾತ್ರೆಯೊಂದರಲ್ಲಿ ವ್ಯಕ್ತಿಯೊಬ್ಬ ಗ್ರಾಹಕನಿಗೆ ಮಾರಾಟ ಮಾಡುತ್ತಿದ್ದ. ಈ ವೇಳೆ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಈ ಪ್ರತಿಮೆಯನ್ನು ವಶಕ್ಕೆ ಪಡೆದಿದ್ದರು.
Advertisement
ಮಾರಾಟಗಾರರಿಗೆ ಈ ಪ್ರತಿಮೆಯ ಇತಿಹಾಸ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಇದನ್ನು ಭಾರತಕ್ಕೆ ಹಿಂದಿರುಗಿಸಲು ಒಪ್ಪಿಕೊಂಡರು. ಹೀಗಾಗಿ ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಲಂಡನ್ ನಲ್ಲಿರುವ ಭಾರತದ ಹೈ ಕಮೀಷನರ್ ವೈ.ಕೆ.ಸಿಂಹಾ ಅವರಿಗೆ ಲಂಡನ್ ಪೊಲೀಸ್ ಹಸ್ತಾಂತರಿಸಿದೆ.
Advertisement
12ನೇ ಶತಮಾನದಲ್ಲಿ ತಯಾರಿಸಲಾಗಿದ್ದ ಒಟ್ಟು 14 ಕಂಚಿನ ಬುದ್ಧನ ಮೂರ್ತಿಗಳಲ್ಲಿ ಪೈಕಿ ಇದು ಒಂದಾಗಿದೆ. 1961ರಲ್ಲಿ ನಳಂದಾ ಪುರಾತತ್ವ ಮ್ಯುಸಿಯಂನಿಂದ ಕಳ್ಳತನ ಮಾಡಲಾಗಿತ್ತು. ಪತ್ತೆಗಾಗಿ ಅಧಿಕಾರಿಗಳು ಶ್ರಮಿಸಿದ್ದರೂ ಎಲ್ಲೂ ಸಿಕ್ಕಿರಲಿಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv