ಮಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಬೆಚ್ಚಿ ಬೀಳಿಸಿದೆ. ಈ ಘಟನೆ ಬಳಿಕ ಎಜುಕೇಶನ್ ಹಬ್ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನದಲ್ಲಿ ಪೊಲೀಸರು ಇನ್ನಷ್ಟು ಅಲರ್ಟ್ ಆಗಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರ ಸುರಕ್ಷೆತೆಗಾಗಿ ಅಧಿಕಾರಿ, ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
Advertisement
ಇಂದು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಮಹಿಳಾ ಸುರಕ್ಷೆತೆಗಾಗಿ ಒಂದು ದಿನ ಎಂಬ ಜಾಗೃತಿ ಕಾರ್ಯ ನಡೆಸಲಾಯಿತು. ಪೊಲೀಸ್ ಇಲಾಖೆಯಲ್ಲಿ ಲೋಕಾರ್ಪಣೆ ಮಾಡಿರುವ ಇ.ಆರ್.ಎಸ್.ಎಸ್ ಎಮರ್ಜೆನ್ಸಿ ವೆಹಿಕಲ್ ಹೆಚ್ಚು ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು. ಓಲಿಂಪಿಯನ್ ಎಂ.ಆರ್.ಪೂವಮ್ಮ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!
Advertisement
Advertisement
ಇ.ಆರ್.ಎಸ್.ಎಸ್ ವೆಹಿಕಲ್‍ನ್ನು ಕಳೆದ ಎಂಟು ತಿಂಗಳ ಹಿಂದೆ ಲೋಕಾರ್ಪಣೆಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ 112 ನಂಬರ್‍ಗೆ ಕರೆ ಮಾಡಿದ ತಕ್ಷಣ ಬೆಂಗಳೂರಿನ ಕಂಟ್ರೋಲ್ ರೂಂಗೆ ಈ ಕರೆ ಹೋಗುತ್ತೆ. ಕ್ಷಣ ಮಾತ್ರದಲ್ಲಿ ಕರೆ ರಿಸೀವ್ ಆಗಿ ಕರೆ ಮಾಡಿದವರ ವಿವರ, ಸ್ಥಳ, ಆಗಿರುವ ತೊಂದರೆ ಮಾಹಿತಿ ಪಡೆದು ಸ್ಥಳಕ್ಕೆ ಹತ್ತಿರವಿರುವ ಇ.ಆರ್.ಎಸ್.ಎಸ್ ವೆಹಿಕಲ್, ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುತ್ತೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಾವನನ್ನೇ ಕೊಲೆ ಮಾಡಿದವನು!
Advertisement
ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಎಂಟು ತಿಂಗಳಲ್ಲಿ ಈ ರೀತಿ 4000ಕ್ಕೂ ಹೆಚ್ಚು ಕರೆ ಬಂದಿದ್ದು, ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸ್ಪಂದಿಸಿದೆ. ಇಂದು ಸ್ವತಃ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಡಿಸಿಪಿ ಸೇರಿದಂತೆ ಎಲ್ಲ ಅಧಿಕಾರಿ ಸಿಬ್ಬಂದಿ ಈ ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದರು. ಪ್ರಾಯೋಗಿಕವಾಗಿ ಪೊಲೀಸ್ ಆಯುಕ್ತರೇ ಕರೆ ಮಾಡಿ ಚೆಕ್ ಮಾಡಿದರು.
ಇಂದು ಈ ಇ.ಆರ್.ಎಸ್.ಎಸ್ ವೆಹಿಕಲ್‍ನಲ್ಲಿ 100ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಟೀಮ್ ವರ್ಕ್ ಮಾಡಿದರು. 20ಕ್ಕೂ ಹೆಚ್ಚು ಎಮರ್ಜೆನ್ಸಿ ಪೊಲೀಸ್ ವೆಹಿಕಲ್ ಬಳಕೆ ಮಾಡಲಾಯಿತು. ತುರ್ತು ಸಂದರ್ಭದಲ್ಲಿ ಗರಿಷ್ಠ 15 ನಿಮಿಷದೊಳಗೆ, ನಗರ ವ್ಯಾಪ್ತಿಯಲ್ಲಿ ಕನಿಷ್ಟ 5 ನಿಮಿಷದೊಳಗೆ ಸ್ಥಳಕ್ಕೆ ಬಂದು ರೆಸ್ಪಾನ್ಸ್ ಮಾಡುವ ಈ ಸೇವೆಯನ್ನು ಎಲ್ಲರೂ ಅಗತ್ಯ ಸಂದರ್ಭದಲ್ಲಿ ಬಳಸಬಹುದಾಗಿದೆ.