ಕಲಬುರಗಿ: ಮೋದಿ ನಿಂತ ನೆಲದಲ್ಲೆ ರಾಹುಲ್ ಗಾಂಧಿ ಅಬ್ಬರಿಸೋಕೆ ಮುಂದಾಗಿದ್ದಾರೆ. ಮಾರ್ಚ್ 18ರಂದು ಲೋಕಸಭಾ ಚುನಾವಣೆಯ ಪ್ರಚಾರ ನಿಮಿತ್ತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಲಬುರಗಿಯ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಮಾರ್ಚ್ 18ರಂದು ಕಲಬುರಗಿಯ ಎನ್.ವಿ ಕಾಲೇಜು ಮೈದಾನದಲ್ಲಿ ಸಂಜೆ ನಾಲ್ಕು ಗಂಟೆಗೆ ಕಾಂಗ್ರೆಸ್ ಸಮಾವೇಶ ನಡೆಸಲಿದ್ದಾರೆ. ಕಲಬುರಗಿ ಮತ್ತು ಬೀದರ್ ಲೋಕಸಭಾ ಅಭ್ಯರ್ಥಿಗಳ ಪರ ರಾಹುಲ್ ಗಾಂಧಿ ಮತ ಬೇಟೆಯಾಡೋದಕ್ಕೆ ಸಜ್ಜಾಗಿದ್ದಾರೆ.
Advertisement
Advertisement
ರಾಹುಲ್ ಗಾಂಧಿ ಸಮಾವೇಶ ಫೈನಲ್ ಆಗುತ್ತಿದ್ದಂತೆಯೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕೂಡ ನಡೆಸಿದರು. ರಾಹುಲ್ ಗಾಂಧಿ ಸಮಾವೇಶದ ಬಗ್ಗೆ ಪೂರ್ವಾಪರ ಚರ್ಚೆ ನಡೆಸಿ ಸಮಾವೇಶ ಯಶಸ್ವಿಯಾಗುವಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
Advertisement
ರಾಹುಲ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಟಾಸ್ಕ್ ಕೂಡ ಪ್ರಿಯಾಂಕ್ ಖರ್ಗೆ ಪಡೆದಿದ್ದಾರೆ. ಮೋದಿ ವಿರುದ್ಧ ಸದನದಲ್ಲಿ ಮಾತಾಡುವಂತಹ ಏಕೈಕ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ ಆಗಿರುವದ್ರಿಂದ ಈ ಬಾರಿಯ ಚುನಾವಣೆ ಸಾಕಷ್ಟು ರಂಗೇರಲಿದೆ. ಮೋದಿ ನಡೆಸಿದ ಸಮಾವೇಶದಲ್ಲಿ ರಾಹುಲ್ ಗಾಂಧಿ ಸಮಾವೇಶ ನಡೆಸುತ್ತಿರುವುದಕ್ಕೆ ಮೋದಿಗೆ ಟಕ್ಕರ್ ಕೊಡ್ತಾರಾ ಎನ್ನುವ ಸಾಕಷ್ಟು ನೀರಿಕ್ಷೆಗಳು ಕೂಡ ಜನರಲ್ಲಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv