ನವದೆಹಲಿ: ಮ್ಯಾಂಗೋ ಮ್ಯಾನ್ ಎಂದೇ ಖ್ಯಾತರಾಗಿರುವ ಹಾಜಿ ಕಲಿಮುಲ್ಲಾ ಖಾನ್ ಅವರು ಸಂಶೋಧನೆ ಮಾಡಿರುವ ಮಾವಿನ ತಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.
ಹಾಜಿ ಕಲಿಮುಲ್ಲಾ ಖಾನ್ ಅವರು ಮಾವಿನ ಹಣ್ಣಿನ ಹೊಸ ತಳಿಗಳ ಸಂಶೋಧನೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಈಗ ಅಮಿತ್ ಶಾ ಅವರ ಹೆಸರನ್ನು ನಾಮಕರಣ ಮಾಡಿರುವ ಮಾವಿನ ತಳಿಗಳು ಶಾ ಮಾವು ಎಂದೇ ಖ್ಯಾತವಾಗಲಿವೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾಜಿ ಕಲಿಮುಲ್ಲಾ ಖಾನ್, ಅಮಿತ್ ಶಾ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸಾಮಥ್ರ್ಯ ಹೊಂದಿದ್ದಾರೆ. ಶಾ ಮಾವಿನ ತಳಿ ಕೋಲ್ಕತ್ತಾದ ಹುಸ್ನ್-ಎ-ಆರಾ ಹಾಗೂ ಲಖನೌನಲ್ಲಿ ಸಿಗುವ ಜನಪ್ರಿಯ ದಸೇರಿ ತಳಿಯ ಮಿಶ್ರ ತಳಿಯಾಗಿದೆ. ಈ ಮಾವು ಈಗ ಹಣ್ಣಾಗುತ್ತಿದ್ದು, ಶೀಘ್ರವೇ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಕಲಿಮುಲ್ಲಾ ಖಾನ್ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ವಿಶಿಷ್ಟ ಮಾವಿನ ತಳಿಗೆ ನಾಮಕರಣ ಮಾಡಿದ್ದರು. ರಾಜಕಾರಣಿಗಳಷ್ಟೇ ಅಲ್ಲದೇ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ಐಶ್ವರ್ಯ ರೈ, ಸೇರಿದಂತೆ ಬಾಲಿವುಡ್ ತಾರೆಗಳು ಹಾಗೂ ದೇಶದ ಗಣ್ಯರ ಹೆಸರನ್ನೂ ಮಾವಿನ ತಳಿಗೆ ನಾಮಕರಣ ಮಾಡಿದ್ದಾರೆ.