ಚಿಕ್ಕಬಳ್ಳಾಪುರ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳಕ್ಕೆ ಜನ ವಿಲವಿಲ ಒದ್ದಾಡಿ ಸಾವು ನೋವು ಆಗಿರುವ ಸಂದರ್ಭದಲ್ಲೇ ಮೀಟರ್ ಬಡ್ಡಿ ಹಾವಳಿಯೂ ಹೆಚ್ಚಾಗಿದೆ. ನೂರು ರೂಪಾಯಿ ಸಾಲಕ್ಕೆ ಪ್ರತಿ ತಿಂಗಳು 10-15 ಪರ್ಸೆಂಟ್ ವಸೂಲಿ ಮಾಡಿದ್ದಲ್ಲದೇ ಬಡ್ಡಿ, ಚಕ್ರಬಡ್ಡಿ, ಅಸಲು ಸಮೇತ ಸಾಲ ತೀರಿಸಿದ್ರೂ ಶ್ಯೂರಿಟಿ ಇಟ್ಟುಕೊಂಡಿದ್ದ ಚೆಕ್‌ಗಳನ್ನು ನೀಡದೇ ಕಿರುಕುಳ ನೀಡುತ್ತಿರುವ ಆರೋಪ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ಕೇಳಿಬಂದಿದೆ.
ಬಡ್ಡಿ, ಚಕ್ರಬಡ್ಡಿ, ಅಸಲು ಸಮೇತ ಸಾಲ ಮೀಟರ್ ಬಡ್ಡಿ ಸಾಲ ತೀರಿಸಿದ್ರೂ.. ಶ್ಯೂರಿಟಿ ಇಟ್ಟುಕೊಂಡಿದ್ದ ಚೆಕ್‌ಗಳನ್ನು ನೀಡದೆ ಕಿರುಕುಳ ನೀಡುತ್ತಿದ್ದಾನೆ ಅಂತ ಆರೋಪಿಸಿ ಆತನ ಫೋಟೋಗಳನ್ನು ಪ್ರದರ್ಶನ ಮಾಡಿ ಚಿಕ್ಕಬಳ್ಳಾಪುರ ತಾಲೂಕಿನ ಎಲೆಹಳ್ಳಿ, ಕಂಡಕನಹಳ್ಳಿ ಹಾಗೂ ಆವಲಹಳ್ಳಿ ಗ್ರಾಮದ ಸಂತ್ರಸ್ತರು ನ್ಯಾಯ ಕೇಳ್ತಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗಳು ಆಶೀರ್ವಾದ ಮಾಡಿದ್ರೆ, ಯೋಗ್ಯ ಅಂದ್ರೆ ಜನರ ವೋಟು ಗ್ಯಾರಂಟಿ: ಮುಖ್ಯಮಂತ್ರಿ ಚಂದ್ರು
ಮದುವೆ ಸೇರಿದಂತೆ ಕೃಷಿ ಕಾಯಕಕ್ಕೆ ಕೈ ಸಾಲ ಅಂತ 10 ಸಾವಿರ 20 ಸಾವಿರ ರೂಪಾಯಿಯನ್ನ ಎಲೆಹಳ್ಳಿ ಗ್ರಾಮದ ವೆಂಕಟೇಶ್ ಬಳಿ ಪಡೆದುಕೊಂಡಿದ್ರಂತೆ. ಸಾಲ ಕೊಡುವಾಗ ಖಾಲಿ ಚೆಕ್ ಪಡೆದಿದ್ದ ವೆಂಕಟೇಶ್. 100 ರೂ.ಗೆ 10 ರಿಂದ 15 ಪರ್ಸೆಂಟ್ ಬಡ್ಡಿ ಹಾಕ್ತಿದ್ದನಂತೆ. ಆದ್ರೂ ಕಷ್ಟ ಅಂತ ತಗೊಂಡು ವರ್ಷಾನುಗಟ್ಟಲೇ ಬಡ್ಡಿ ಕಟ್ಟಿ ಸಾಕಾಗಿ ಕೊನೆಗೆ ಅಸಲು ಹಣ ಕೊಟ್ಟು ಕೈ ತೊಳೆದುಕೊಂಡಿದ್ದಾರಂತೆ. ಆದ್ರೆ ಸಾಲ ಪಡೆಯುವಾಗ ಶ್ಯೂರಿಟಿಯಾಗಿ ಕೊಟ್ಟಿದ್ದ ಖಾಲಿ ಚೆಕ್ ವಾಪಾಸ್ ಕೊಡದ ವೆಂಕಟೇಶ್, 10 ಸಾವಿರಕ್ಕೆ 1.20 ಲಕ್ಷ ಸೇರಿ 2 ಲಕ್ಷ ಹಣ ಕೊಡಬೇಕು ಅಂತ ಖಾಲಿ ಚೆಕ್‌ನಲ್ಲಿ ಬರೆದುಕೊಂಡು ಚೆಕ್ ಬೌನ್ಸ್ ಕೇಸ್ ಹಾಕಿ ಕೋರ್ಟ್‌ಗೆ ಅಲೆದಾಡಿಸುತ್ತಿದ್ದಾನಂತೆ ಅಂತ ಆರೋಪಿಸುತ್ತಿದ್ದಾರೆ.
ಅಲ್ಲದೇ ಕಂಡಕನಹಳ್ಳಿ ನಿವಾಸಿ ಶಿವಶಂಕರ ಬಾಬು, ಆವಲಹಳ್ಳಿ ಮುನಿರಾಜು, ಕಂಡಕನಹಳ್ಳಿ ನಿವಾಸಿ ಭಾಗ್ಯಮ್ಮ, ಕಂಡಕನಹಳ್ಳಿ ನಿವಾಸಿ ನಾರಾಯಣಸ್ವಾಮಿ, ಅಂಗರೇಖನಹಳ್ಳಿ ಲಕ್ಷ್ಮಿದೇವಮ್ಮ, ಕಾಡದಿಬ್ಬೂರು ಮುನಿರಾಜು, ಕಾಡದಿಬ್ಬೂರು ಮುರಳಿ, ವರಮಲ್ಲೇನಹಳ್ಳಿ ಎಂ. ಮುನಿರಾಜು ಸೇರಿದಂತೆ ಹಲವರು ಈಗಾಗಲೇ ವೆಂಕಟೇಶ್ ಮೀಟರ್ ಬಡ್ಡಿ ದಂಧೆ ಮೂಲಕ ನಮಗೆ ಕೊಡಬಾರದ ಕಾಟ ಕೊಟ್ಟಿದ್ದಾನೆ. ನಮ್ಮ ಖಾಲಿ ಚೆಕ್ ನಮಗೆ ವಾಪಸ್ ಕೊಡದೆ ವಂಚನೆ ನಮ್ಮ ಮೇಲೆಯೇ ಕೇಸ್ ಹಾಕಿ ಬೆದರಿಸ್ತಿದ್ದಾನೆ ಅಂತ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ವೆಂಕಟೇಶ್ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಸಾಲ ಕೊಟ್ಟಿರೊದು ನಿಜ. ಆದ್ರೆ ಬಡ್ಡಿ ಪಡೆದಿಲ್ಲ ಮೀಟರ್ ಬಡ್ಡಿ ದಂಧೆ ನಡೆಸಿಲ್ಲ. ಸಾಲ ಪಡೆವದರೆಲ್ಲ ನಮ್ಮ ಸಂಬಂಧಿಕರು ಹಣ ಪಡೆದು ಸಾಲ ವಾಪಸ್ ಕೊಡ್ತೀವಿ ಅಂತ ಒಪ್ಕೊಂಡು ಈಗ ಹೀಗೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರ ಸ್ತ್ರೀ ಜೊತೆ ಸಲುಗೆ – ಪತಿಯ ಕಾಲು ಮುರಿಯಲು ಪತ್ನಿಯಿಂದಲೇ 5 ಲಕ್ಷಕ್ಕೆ ಸುಪಾರಿ