ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚೆಗೆ ತಾವು ತಾಯಿಯಾಗಿರುವ ಗುಡ್ ನ್ಯೂಸ್ ತಿಳಿಸಿದ್ದರು. ಇದರ ನಡುವೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ನಟಿ ಪೂರ್ಣಗೊಳಿಸಲು ಚಿತ್ರತಂಡಕ್ಕೆ ಸಾಥ್ ನೀಡಿದ್ದರು. ಇದೀಗ ನಟಿಯ ಬಗ್ಗೆ ಹೊಸ ವಿಚಾರವೊಂದು ಹೊರಬಿದ್ದಿದೆ. ಮೇ ಬಳಿಕ ಸಿನಿಮಾಗೆ ನಟಿ ಗುಡ್ ಬೈ ಹೇಳಲಿದ್ದಾರೆ.
ಸದ್ಯ ದೀಪಿಕಾ ಸಿಂಗಂ 3, ಪ್ರಭಾಸ್ (Prabhas) ಜೊತೆಗಿನ ‘ಕಲ್ಕಿ 2898 ಡಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೆಗ್ನೆಂಟ್ ದೀಪಿಕಾ ವರ್ಕ್ ಡೆಡಿಕೇಷನ್‌ನಿಂದ ಒಪ್ಪಿಕೊಂಡಿರುವ ಚಿತ್ರಕ್ಕೆ ತೊಂದರೆಯಾಗಬಾರದು ಎಂದು ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ವಿನ್ನರ್ ವಿರುದ್ಧ ED ಕೇಸ್ ದಾಖಲು
ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಸದ್ಯ ‘ಕಲ್ಕಿ 2898 ಡಿ’ ಚಿತ್ರದ ಪ್ರಚಾರಕ್ಕೆ ಕಮಿಟ್ ಆಗಿದ್ದಾರೆ. ಅದಕ್ಕೆ ಚಿತ್ರ ತಂಡವು ಆಕೆಯ ಗರ್ಭಧಾರಣೆಯನ್ನು ಪರಿಗಣಿಸಿ, ಮುಂದಿನ ಶೂಟಿಂಗ್ ಅನ್ನು ಮುಂಚಿತವಾಗಿ ಯೋಜಿಸಿದ್ದಾರೆ. ಅವರು ನಿರ್ಮಾಪಕರ ಜೊತೆ ಚರ್ಚೆ ಮಾಡಿ, ಮೇ ಅಂತ್ಯದೊಳಗೆ ಶೂಟಿಂಗ್ ಮತ್ತು ಪ್ರಚಾರಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳಿಸುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಹೊಸ ಸಿನಿಮಾ ಒಪ್ಪಿಕೊಂಡ ವಿಜಯ್ ದೇವರಕೊಂಡ
ದೀಪಿಕಾ ಅವರು ಮೇ ಅಂತ್ಯದ ನಂತರ ಮನೆಯಲ್ಲಿ ರೆಸ್ಟ್ ಮಾಡುವ ಕಾರಣ ಅವರು ಜೂನ್‌ನಿಂದ ಯಾವುದೇ ಶೂಟಿಂಗ್ ಅಥವಾ ಚಿತ್ರದ ಪ್ರಚಾರಕ್ಕೆ ಲಭ್ಯವಿರುವುದಿಲ್ಲ ಎಂದು ಎನ್ನಲಾಗಿದೆ. ದೀಪಿಕಾ ಅವರು ಮುಂದಿನ ತಿಂಗಳಿನಿಂದ ಅಂತಿಮವಾಗಿ ಕೆಲಸಕ್ಕೆ ವಿರಾಮ ಹೇಳುತ್ತಿದ್ದಾರೆ. ಅವರ ಹೆರಿಗೆ ದಿನಾಂಕವು ಸೆಪ್ಟೆಂಬರ್‌ನಲ್ಲಿ ಇರುವುದರಿಂದ ಕೆಲಸದಿಂದ ದೂರ ಸರಿದು ತಮ್ಮ ಆರೋಗ್ಯದ ಕಡೆಗೆ ಸಂಪೂರ್ಣವಾಗಿ ಗಮನಹರಿಸಲಿದ್ದಾರೆ.
ಅಂದಹಾಗೆ, ದೀಪಿಕಾ ಪಡುಕೋಣೆ ಹೆರಿಗೆ ಬೆಂಗಳೂರಿನಲ್ಲಿಯೇ ನಡೆಯಲಿದೆ. ಹೊಸ ಅತಿಥಿಯ ಆಗಮನ ನಿರೀಕ್ಷೆಯಲ್ಲಿದ್ದಾರೆ ದೀಪಿಕಾ ಕುಟುಂಬ.