ಕೋಲ್ಕತ್ತಾ: ಮಣಿಪುರದ (Manipura) ಬಳಿಕ ಇದೀಗ ಪಶ್ಚಿಮ ಬಂಗಾಳದಲ್ಲಿಯೂ (West Bengal) ಇಬ್ಬರು ಮಹಿಳೆಯರನ್ನು ಅರೆಬೆತ್ತಲೆಗೊಳಿಸಿ ಥಳಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆ ಮೂರ್ನಾಲ್ಕು ದಿನಗಳ ಹಿಂದೆ ನಡೆದಿದೆ. ಮಾಲ್ಡಾದ ಪಕುವಾಹತ್‍ನಲ್ಲಿ ಸ್ಥಳೀಯರು ಕಳ್ಳತನದ ಶಂಕೆಯ ಮೇಲೆ ಇಬ್ಬರು ಮಹಿಳೆಯರನ್ನು ಹಿಡಿದು ಥಳಿಸಿದ್ದಾರೆ. ಆರೋಪಿತ ಮಹಿಳೆಯರಿಬ್ಬರ ಮೇಲೆ ಹಲವಾರು ಮಹಿಳೆಯರು ಹಲ್ಲೆ ನಡೆಸುತ್ತಿದ್ದಾರೆ. ಇಬ್ಬರು ಮಹಿಳೆಯರನ್ನು ಅರೆಬೆತ್ತಲೆಗೊಳಿಸಿ ಕೂದಲು ಹಿಡಿದು ಎಳೆದಾಡಿ, ಚಪ್ಪಲಿಯಲ್ಲಿ ಹೊಡೆಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್ – ಪ್ರಮುಖ ಆರೋಪಿ ಮನೆಗೆ ಬೆಂಕಿ ಹಾಕಿ ಆಕ್ರೋಶ
Advertisement
Advertisement
ಈ ವೀಡಿಯೋ ವೈರಲ್ ಆದ ಬಳಿಕವೇ ತಮ್ಮ ಗಮನಕ್ಕೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದಾಗ ಇಬ್ಬರು ಮಹಿಳೆಯರು ಕಳ್ಳತನ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಂಗಡಿಯ ಮಹಿಳೆಯರೆಲ್ಲಾ ಸೇರಿ ಥಳಿಸಿದ್ದಾರೆ. ಘಟನೆಯ ನಂತರ ಹಲ್ಲೆಗೈದ ಮಹಿಳೆಯರೂ ಪರಾರಿಯಾಗಿದ್ದು, ಥಳಿತಕ್ಕೆ ಒಳಗಾದವರು ಭಯದಿಂದ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಇದನ್ನೂ ಓದಿ: ಪಣಂಬೂರು ಬೀಚ್‍ಗೆ ತೆರಳಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‍ಗಿರಿ
Advertisement
Advertisement
ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರು ಪ್ರತಿಕ್ರಿಯಿಸಿ, ಈ ಘಟನೆಯು 3 ರಿಂದ 4 ದಿನಗಳ ಹಿಂದೆ ಮಾಲ್ಡಾದ ಪಕುಹತ್ ಪ್ರದೇಶದಲ್ಲಿ ನಡೆದಿದೆ. ಕಳ್ಳತನದ ಶಂಕೆಯಲ್ಲಿ ಇಬ್ಬರು ಮಹಿಳೆಯರು ಸ್ಥಳೀಯ ವ್ಯಾಪಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಇಬ್ಬರನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಥಳಿತಕ್ಕೊಳಗಾದ ಮಹಿಳೆಯರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಇದೀಗ ಈ ಬಗ್ಗೆ ತನಿಖೆ ಆರಂಭಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Web Stories