ಚೆನ್ನೈ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ, ಕಲೈನರ್ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಾನುವಾರ ರಾತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದು, ಸದ್ಯ ಚೆನ್ನೈನ ಕಾವೇರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ರಾತ್ರಿ ಆಸ್ಪತ್ರೆ ಮಂಡಳಿ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‍ನಲ್ಲಿ ಕರುಣಾನಿಧಿ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಅಂತ ಹೇಳಿದೆ. ರಾತ್ರಿ ಮನೆಗೆ ತೆರಳುವ ಮುನ್ನ ಮಾತನಾಡಿದ ಪುತ್ರ ಎಂ.ಕೆ ಸ್ಟಾಲಿನ್, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ, ಕರುಣಾನಿಧಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆಂಬಲಿಗರು ಶಾಂತಿಯಿಂದ ವರ್ತಿಸಿ, ಮನೆಗೆ ತೆರಳಬೇಕು ಅಂತ ಮನವಿ ಮಾಡಿದರು.
Advertisement
ಸಿಎಂ ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಕೊಯಂಬತ್ತೂರು ಪ್ರವಾಸ ಮೊಟಕುಗೊಳಿಸಿ, ಕಾವೇರಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಆಸ್ಪತ್ರೆ ಮತ್ತು ಗೋಪಾಲಪುರಂನ ಕರುಣಾನಿಧಿ ನಿವಾಸದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಬೆಂಬಲಿಗರು ಕರುಣಾನಿಧಿ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಆಸ್ಪತ್ರೆ ಮತ್ತು ಗೋಪಾಲಪುರಂ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಣ್ಣಾ ವಿವಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Advertisement
— KalaignarKarunanidhi (@kalaignar89) July 29, 2018
Advertisement
காவேரி மருத்துவனையில் சிகிச்சை பெற்று வரும் தலைவர் கலைஞர் அவர்களை இந்திய குடியரசு துணைத் தலைவர் மேதகு வெங்கைய்யா நாயுடு – தமிழக ஆளுநர் மாண்புமிகு பன்வாரிலால் புரோகித் ஆகியோர் நேரில் சந்தித்து தலைவர் கலைஞர் அவர்களின் உடல்நலம் குறித்து மருத்துவரிடம் கேட்டறிந்தனர் – Admin pic.twitter.com/dk4GzoYzUK
— KalaignarKarunanidhi (@kalaignar89) July 29, 2018