ಬೆಂಗಳೂರು: ಎಸ್‍ಸಿ (SC), ಎಸ್‍ಟಿ (ST) ಮೀಸಲಾತಿ (Reservation) ಹೆಚ್ಚಳದ ಲಾಭ ಪಡೆಯಲು ಮುಂದಾದ ಬಿಜೆಪಿಗೆ (BJP) ಮಲ್ಲಿಕಾರ್ಜುನ ಖರ್ಗೆ (Mallikaarjun Kharge) ಪ್ರತ್ಯಾಸ್ತ್ರ ಹೂಡಲು ಕೈ ಪಾಳಯ ಸಿದ್ಧತೆ ಮಾಡಿಕೊಂಡಿದೆ.
ಬಿಜೆಪಿಯ ಮೀಸಲು ಹೆಚ್ಚಳ ಅನುಕೂಲಕ್ಕಿಂತ ದೊಡ್ಡ ಅವಕಾಶ ಕಾಂಗ್ರೆಸ್ (Congress) ಕೊಟ್ಟಿದೆ ಎಂದು ಬಿಂಬಿಸಲು ಸಿದ್ಧತೆ ಮಾಡಿಕೊಂಡಿದೆ. ಎಸ್‍ಸಿ, ಎಸ್‍ಟಿ ಮೀಸಲು ಹೆಚ್ಚಳದ ಕ್ಲೈಮ್ ಮಾಡಲು ಮುಂದಾದ ಬಿಜೆಪಿಗೆ ಖರ್ಗೆ ಆಯ್ಕೆಯ ಕೌಂಟರ್ ಪ್ಲಾನ್ ಆಗಿದ್ದು, ಜೊತೆಗೆ ದಲಿತ ಎಡಗೈ ಮೀಸಲು ವಿಚಾರವನ್ನು ಮುನ್ನಲೆಗೆ ತರಲು ಸಿದ್ಧತೆ ನಡೆಸಿದೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಡದ ಮೂಲಕ ಬಿಜೆಪಿ ವೋಟ್ ಬ್ಯಾಂಕ್ ಲಗ್ಗೆಗೆ ಕಾಂಗ್ರೆಸ್ ಪ್ಲಾನ್ ಮಾಡಿದ್ದು, ದಲಿತ ಎಡ – ಬಲ ಫೈಟ್‍ಗೆ ನ್ಯಾಯ ಕೊಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕೈ ತಂತ್ರಗಾರಿಕೆ ಆರಂಭಿಸಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಗೆ ಮೋದಿ ವಿಶ್
ಪಂಚಮಸಾಲಿ (Panchamasali), ಒಕ್ಕಲಿಗ (Vokkaliga) ಹಾಗೂ ಕುರುಬ (Kuruba) ಸಮುದಾಯದ ಬೇಡಿಕೆಗೆ ನ್ಯಾಯ ಕೊಡಿ ಎಂದು ದಾಳ ಉರುಳಿಸಲು ಸಹಾ ಪ್ಲಾನ್ ಮಾಡಲಾಗಿದೆ. ಭಾರತ್ ಜೋಡೋ (Bharat Jodo Yatra) ಮುಗಿಯುತ್ತಿದ್ದಂತೆ ಕೈ ಪಾಳಯದಿಂದ ಆಯಾ ಸಮುದಾಯದ ನಾಯಕರನ್ನು ಅಖಾಡಕ್ಕಿಳಿಸಲು ಪ್ಲಾನ್ ಆರಂಭಗೊಂಡಿದ್ದು, ಈ ಮೂಲಕ ಎಸ್‍ಸಿ, ಎಸ್‍ಟಿ ಮೀಸಲು ಹೆಚ್ಚಳದ ಲಾಭದ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ಶಾಕ್ ಕೊಡಲು ಕೈ ಪಾಳಯ ಸದ್ದಿಲ್ಲದೆ ಪ್ಲಾನ್ ಮಾಡುತ್ತಿದೆ. ಹೀಗೆ ಜಾತಿ ಅಸ್ತ್ರದ ಮೂಲಕ ಮೇಲುಗೈ ಸಾಧಿಸಲು ಮುಂದಾದ ಬಿಜೆಪಿಗೆ ಜಾತಿ ಅಸ್ತ್ರದ ಮೂಲಕ ಕೌಂಟರ್ ಕೊಡಲು ಕೈ ಪಾಳಯ ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ? ಅತಿ ಹೆಚ್ಚು ಮಳೆ ಎಲ್ಲಿಯಾಗಿದೆ?
Live Tv
[brid partner=56869869 player=32851 video=960834 autoplay=true]