ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್’ (Animal) ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ತಮಿಳಿನ ಸ್ಟಾರ್ ಅಜಿತ್ ಕುಮಾರ್ ಸಿನಿಮಾದಲ್ಲಿ ಬಾಬಿ ಡಿಯೋಲ್ (Bobby Deol) ನಟಿಸಲು ಕರೆ ಬಂದಿದೆ.
- Advertisement -
ಬಾಲಿವುಡ್ ನಟ ಬಾಬಿ ಡಿಯೋಲ್ ಇದೀಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ಸಿಂಗ್ ಶುರು ಮಾಡಿದ್ದಾರೆ. ಅನಿಮಲ್ ಚಿತ್ರದ ಸಕ್ಸಸ್ ನಂತರ ತಮಿಳಿನ ನಟ ಸೂರ್ಯ (Suriya) ನಟನೆಯ ಕಂಗುವ (Kanguva) ಚಿತ್ರದಲ್ಲಿ ಬಾವಿ ಡಿಯೋಲ್ ನಟಿಸಿ ಬಂದಿದ್ದರು. ಈಗ ಅಜಿತ್ ಕುಮಾರ್ (Ajith Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly Film) ಚಿತ್ರದಲ್ಲಿ ನಟಿಸಲು ನಟ ಬಾಬಿಗೆ ಕೇಳಲಾಗಿದೆ.
- Advertisement -
- Advertisement -
ಅಜಿತ್ ನಟನೆಯ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಟಿಸಲು ಚಿತ್ರತಂಡ ಬಾಬಿ ಡಿಯೋಲ್ ಜೊತೆ ಒಂದು ಸುತ್ತಿನ ಚರ್ಚೆ ನಡೆಸಿದೆ. ಬಾಬಿ ಡಿಯೋಲ್ ಕೂಡ ಕಥೆ ಕೇಳಿ ಥ್ರಿಲ್ ಆಗಿದ್ದಾರಂತೆ. ಆದರೆ ಚಿತ್ರತಂಡ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ:ಮಗಳಿಗಾಗಿ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಮುಂದಾದ ಶಾರುಖ್ ಖಾನ್
- Advertisement -
‘ಕಂಗುವ’ ಸಿನಿಮಾದಲ್ಲಿ ಬಾಬಿ ಡಿಯೋಲ್ ಲುಕ್ ನೋಡಿ ಅಭಿಮಾನಿಗಳು ಬೆರಗಾಗಿದ್ದರು. ಈ ಬೆನ್ನಲ್ಲೇ ಅಜಿತ್ ಕುಮಾರ್ ಸಿನಿಮಾಗಾಗಿ ನಟನಿಗೆ ಮಣೆ ಹಾಕಿದ್ದಾರೆ. ಒಂದು ವೇಳೆ, ಅವರು ಒಪ್ಪಿದ್ದೇ ಆಗಿದ್ದಲ್ಲಿ ಅಭಿಮಾನಿಗಳಿಗೆ ಮನರಂಜನೆ ಗ್ಯಾರಂಟಿ.