ಶ್ರೀನಗರ: ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ ಮನೆಗಳು, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡು ಅನಾಹುತ ಸೃಷ್ಟಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲೂ (Jammu and Kashmir) ದೊಡ್ಡ ಮಟ್ಟದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಮನೆ, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಇದರೊಂದಿಗೆ ಭೂಮಿ ಕುಸಿತವಾಗಿರುವುದೂ ಕಂಡುಬಂದಿದೆ. ಇದನ್ನೂ ಓದಿ: ಇಡೀ ಜೋಶಿಮಠ ಮುಳುಗುವ ಎಚ್ಚರಿಕೆ ನೀಡಿದ ಇಸ್ರೋ – ಆತಂಕ ಮೂಡಿಸುತ್ತಿದೆ ಉಪಗ್ರಹ ಚಿತ್ರ
Advertisement
Advertisement
ಕಳೆದ ವರ್ಷ ಡಿಸೆಂಬರ್ ವೇಳೆ ಮನೆಯೊಂದರಲ್ಲಿ ಕಾಣಿಸಿಕೊಂಡ ಬಿರುಕುಗಳು ಈಗ ವ್ಯಾಪಿಸಲು ಪ್ರಾರಂಭಿಸಿದೆ ಎಂದು ದೋಡಾದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಅಥರ್ ಅಮೀನ್ ಜರ್ಗರ್ ಹೇಳಿದ್ದಾರೆ.
Advertisement
ದೋಡಾ ಜಿಲ್ಲೆಯ (Doda District) ಮನೆಯೊಂದರಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದು ವ್ಯಾಪಿಸುತ್ತಿದ್ದು, ಎರಡು ದಿನಗಳಲ್ಲಿ 6 ಕಟ್ಟಡಗಳು ಬಿರುಕು ಬಿಟ್ಟಿವೆ. ಈ ಬಿರುಕುಗಳನ್ನು ಸರಿಪಡಿಸಿದ ಪ್ರದೇಶಗಳಲ್ಲಿ ಕೆಲ ಭಾಗಗಳು ಮುಳುಗಡೆಯಾಗುವ ಆತಂಕ ಶುರುವಾಗಿದೆ ಎಂದು ಜರ್ಗರ್ ಹೇಳಿದರು.
Advertisement
ಫೆ.3ರಂದು ಪ್ರಾಥಮಿಕ ಮೌಲ್ಯಮಾಪನ ಮಾಡಲಾಗಿದ್ದು, ಭೂವಿಜ್ಞಾನಿಗಳು ಪ್ರದೇಶಕ್ಕೆ ಭೇಟಿ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು
ಕಳೆದ ತಿಂಗಳು ಉತ್ತರಾಖಂಡದ ಜೋಶಿಮಠದಲ್ಲಿ (Joshimath) ಮನೆ ಹಾಗೂ ರಸ್ತೆಗಳು ಬಿರುಕು ಕಾಣಿಸಿಕೊಂಡಿತ್ತು. ಬಳಿಕ ಸರ್ಕಾರ ಪ್ರತಿ ಸಂತ್ರಸ್ತ ಕುಟುಂಬಳಿಗೆ 1.5 ಲಕ್ಷ ಪರಿಹಾರ ಘೋಷಣೆ ಮಾಡಿತು. ಈ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೋಶಿಮಠದಲ್ಲಿ ಆಗುತ್ತಿರುವ ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿ ಮುಂದೆ ಭೂಕುಸಿತ ಮತ್ತಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k