ಸಿನಿಮಾರಂಗಕ್ಕೂ ರಾಜಕೀಯಕ್ಕೂ ತುಂಬಾನೇ ನಂಟಿದೆ. ಈಗಾಗಲೇ ಬಣ್ಣದ ಲೋಕದಿಂದ ರಾಜಕೀಯದಲ್ಲಿ ಬದುಕು ಕಟ್ಟಿಕೊಂಡು ಜನಸೇವೆ ಮಾಡಿರುವ ಅನೇಕ ಕಲಾವಿದರು ಇದ್ದಾರೆ. ಇತ್ತೀಚಿಗೆ ಕಾಲಿವುಡ್ ನಟ ವಿಜಯ್ ದಳಪತಿ, ರಾಜಕೀಯ ಎಂಟ್ರಿ ಬಗ್ಗೆ ಸಿಕ್ಕಾಪಟ್ಟೆ ಟಾಕ್ ಆಗಿತ್ತು. ಈ ಬೆನ್ನಲ್ಲೇ ಅಭಿಷೇಕ್ ಬಚ್ಚನ್ (Abhishek Bachchan) ಎಂಟ್ರಿಯಾಗುವ ಬಗ್ಗೆ ಸುಳಿವು ಸಿಕ್ಕಿದೆ.
Advertisement
ಬಾಲಿವುಡ್‌ನ (Bollywood) ಹಿರಿಯ ನಟ ಬಿಗ್ ಬಿ (Bigg B) ಪುತ್ರ ಅಭಿಷೇಕ್ ಬಚ್ಚನ್ ಅವರು ತಂದೆಯಂತೆ ಚಿತ್ರರಂಗದಲ್ಲಿ ಸಕ್ಸಸ್ ಕಂಡಿಲ್ಲ. ಆದರೆ ನಟ, ವಿಲನ್ ಹೀಗೆ ಹೊಸ ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ವಿಶ್ವಸುಂದರಿ ಐಶ್ವರ್ಯ ರೈ (Aishwarya Rai) ಜೊತೆ ದಾಂಪತ್ಯ ಜೀವನದಲ್ಲಿ ಖುಷಿಯಿಂದಿರೋ ಅಭಿಷೇಕ್ ಬಚ್ಚನ್ ಅವರು ಪಾಲಿಟಿಕ್ಸ್ (Politics) ಎಂಟ್ರಿ ಬಗ್ಗೆ ಗುಸು ಗುಸು ಶುರುವಾಗಿದೆ. ಇದನ್ನೂ ಓದಿ:ತಮಿಳು ಚಿತ್ರೋದ್ಯಮದತ್ತ ಮತ್ತೋರ್ವ ಕನ್ನಡದ ನಟಿ
Advertisement
Advertisement
ಬಚ್ಚನ್ ಕುಟುಂಬಕ್ಕೆ ರಾಜಕೀಯ ಹೊಸದಲ್ಲ. ಅಭಿಷೇಕ್ ತಾಯಿ ಜಯಾ ಬಚ್ಚನ್ (Jaya Bachchan) ಅವರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯೆ ಆಗಿದ್ದಾರೆ. ಅಮಿತಾಭ್ ಬಚ್ಚನ್ ಕೂಡ ಒಮ್ಮೆ ರಾಜಕೀಯಕ್ಕೆ ಹೋಗಿ ಬಂದಿದ್ದರು. ಈಗ ಅಭಿಷೇಕ್ ಬಚ್ಚನ್ ಕೂಡ ರಾಜಕೀಯಕ್ಕೆ ಎಂಟ್ರಿ ಪಡೆಯಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
Advertisement
ಬರುವ ಲೋಕಸಭಾ ಚುನಾವಣೆಗೆ ಅಭಿಷೇಕ್ ಬಚ್ಚನ್ ಅವರನ್ನು ಕಣಕ್ಕೆ ಇಳಿಸುವ ಪ್ಲ್ಯಾನ್‌ನಲ್ಲಿ ಸಮಾಜವಾದಿ ಪಕ್ಷದವರಿದ್ದಾರೆ ಎನ್ನಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ, ಅಭಿಷೇಕ್‌ಗೆ ರಾಜಕೀಯಕ್ಕೆ ಎಂಟ್ರಿ ಕೊಡುವ ಯೋಚನೆ ಇಲ್ಲ. ಅವರ ಗಮನ ಏನೇ ಇದ್ದರೂ ಸಿನಿಮಾ ಎಂದು ಹೇಳಲಾಗುತ್ತಿದೆ. ಬಚ್ಚನ್ ಕುಟುಂಬದ ಆಪ್ತರು ಇದು ಸುಳ್ಳು ಸುದ್ದಿ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನ ನಟ ಅಭಿಷೇಕ್ ಬಚ್ಚನ್ ಹೇಳುವವರೆಗೂ ಕಾದುನೋಡಬೇಕಿದೆ.