ಶಿವಮೊಗ್ಗ: ಖಾಸಗಿ ಬಸ್‍ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಶಿವಮೊಗ್ಗ ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಖಾಸಗಿ ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈ ವೇಳೆ 2 ಕೆಜಿ 300 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದು, ಕೇರಳ ಮೂಲದ ಅಜೀಲ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಗಡಿ ಬಳಿ ಯುದ್ಧ ವಿಮಾನ ಹಾರಿಸಿ ಭಾರತವನ್ನು ಕೆಣಕುತ್ತಿದೆ ಚೀನಾ
ವಿಚಾರಣೆ ವೇಳೆ ಶಾಕ್
ಪೊಲೀಸರು ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ ಹಿನ್ನೆಲೆ ಫುಲ್ ಶಾಕ್ ಆಗಿದ್ದಾರೆ. ಗಾಂಜಾ ಸಾಗಾಟದ ಕಿಂಗ್ ಪಿನ್ ವಿಲ್ಸನ್‍ನ್ನು ಬಂಧಿಸಿದ ಪೊಲೀಸರು ಬೆಂಗಳೂರು ಮೂಲದ ಮತ್ತೊಬ್ಬ ಆರೋಪಿ ಅಲೆಕ್ಸ್‌ನನ್ನು ಬಂಧಿಸಿದ್ದಾರೆ.
ಪೊಲೀಸೇ ಭಾಗಿ
ಗೃಹ ಸಚಿವರ ತವರು ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೇ ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ. ಅದು ಅಲ್ಲದೇ ಕೇವಲ ಗಾಂಜಾ ಪ್ರಕರಣವಷ್ಟೇ ಅಲ್ಲದೆ ವಿಲ್ಸನ್ ಮತ್ತು ಅಲೆಕ್ಸ್ ಓರ್ವನ ಕೊಲೆಗೂ ಸುಪಾರಿ ನೀಡಿದ್ದರು. ಕೊಲೆ ಮಾಡಲು ಅಪ್ರೋಜ್ ಅಹಮ್ಮದ್‍ಗೆ 80 ಸಾವಿರ ರೂ. ಸುಪಾರಿ ನೀಡಲಾಗಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಇದನ್ನೂ ಓದಿ: ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ
ಪೊಲೀಸರು ಅಪ್ರೋಜ್ ಅಹಮ್ಮದ್‍ನನ್ನು ಬಂಧಿಸಿದ್ದಾರೆ. ಪ್ರಸ್ತುತ ಪೊಲೀಸರು ವಿಲ್ಸನ್, ಅಲೆಕ್ಸ್ ಮತ್ತು ಅಪ್ರೋಜ್ ಅಹಮ್ಮದ್‍ನನ್ನು ಬಂಧಿಸಿದ್ದಾರೆ.