ಭಾರತದ ಚಂದ್ರಯಾನ-3 ಉಡಾವಣೆ ಬೆನ್ನಲ್ಲೇ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ರಷ್ಯಾ

Public TV
1 Min Read
Russia Luna 25

ಮಾಸ್ಕೋ: ಕಳೆದ ತಿಂಗಳು ಭಾರತ ಚಂದ್ರಯಾನ-3 (Chandrayaan-3) ಉಡಾವಣೆ ಮಾಡಿದ್ದು, ಇದರ ಬೆನ್ನಲ್ಲೇ ರಷ್ಯಾ (Russia) ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿ ಚಂದ್ರನೆಡೆಗೆ (Moon) ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.

ವರ್ಷದಿಂದ ಉಕ್ರೇನ್‌ನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಇದೀಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಹೆಜ್ಜೆ ಇಟ್ಟಿದೆ. ಇದೀಗ ಉಡಾವಣೆಯಾಗಿರುವ ಲೂನಾ-25 (Luna-25) ಪ್ರೋಬ್ 1976 ರಿಂದ ರಷ್ಯಾದ ಮೊದಲ ಚಂದ್ರನ ಮೇಲಿನ ಕಾರ್ಯಾಚರಣೆಯಾಗಿದೆ.

Russia Luna 25 1

ಲೂನಾ-25 ಪ್ರೋಬ್ ಅನ್ನು ಹೊತ್ತ ರಾಕೆಟ್ ಗುರುವಾರ ಸ್ಥಳೀಯ ಕಾಲಮಾನ 02:10 ವೇಳೆಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ಉಡಾವಣೆಯಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ತಿಳಿಸಿದೆ. ಈ ಉಪಗ್ರಹ ಆಗಸ್ಟ್ 21ರ ವೇಳಗೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

ಈ ನೌಕೆ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲಿರುವ ಉಪಗ್ರಹ ಅದಕ್ಕೂ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡಲು 3-7 ದಿನಗಳನ್ನು ತೆಗೆದುಕೊಳ್ಳಲಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ-25 ಇಳಿಯಲಿದೆ. ಇಲ್ಲಿಯವರೆಗೆ ಚಂದ್ರನ ಮೇಲೆ ನಡೆಸಲಾಗಿರುವ ಎಲ್ಲಾ ಕಾರ್ಯಾಚರಣೆಗಳು ಸಮಭಾಜಕ ವಲಯದಲ್ಲಿ ಇಳಿದಿವೆ ಎಂದು ಹಿರಿಯ ರೋಸ್ಕೊಸ್ಮಾಸ್ ಅಧಿಕಾರಿ ಅಲೆಕ್ಸಾಂಡರ್ ಬ್ಲೋಖಿನ್ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.

1 ವರ್ಷಗಳವರೆಗೆ ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಲಿರುವ ಬಾಹ್ಯಾಕಾಶ ನೌಕೆ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೊಳಪಡಿಸಲಿದೆ. ಜೊತೆಗೆ ದೀರ್ಘಕಾಲದ ವೈಜ್ಞಾನಿಕ ಸಂಶೋಧನೆ ನಡೆಸಲಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಕ್ರೋಮ್‌, ಫೈರ್‌ಫಾಕ್ಸ್‌, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್‌ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ

Web Stories

Share This Article