– ಚಕ್ಲಾಲಾದ ವಾಯುನೆಲೆಯ ಮೇಲೆ ಭಾರತ ದಾಳಿ
ಇಸ್ಲಾಮಾಬಾದ್: ಭಾರತದ (India) ದಾಳಿಗೆ ಬೆದರಿರುವ ಪಾಕಿಸ್ತಾನ (Pakistan) ಸೇನೆ ರಾವಲ್ಪಿಂಡಿಯಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು (GHQ) ರಾಜಧಾನಿ ಇಸ್ಲಾಮಾಬಾದ್‌ಗೆ (Islamabad) ಶಿಫ್ಟ್ ಮಾಡಲು ಮುಂದಾಗುತ್ತಿದೆ.
ಸದ್ಯ ಪಾಕಿಸ್ತಾನದ ಸೇನಾ ಜನರಲ್ ಪ್ರಧಾನ ಕಚೇರಿ(GHQ) ರಾವಲ್ಪಿಂಡಿಯ ಚಕ್ಲಾಲಾದ ನೂರ್ ಖಾನ್ ವಾಯು ನೆಲೆಯ ಬಳಿಯಿದೆ. ಮೇ 10 ರಂದು ಭಾರತ ಪಾಕ್ ವಾಯುನೆಲೆಯಗಳ ಮೇಲೆ ಭೀಕರ ವಾಯುದಾಳಿ ನಡೆಸಿತು. ಚಕ್ಲಾಲಾ ವಾಯು ನೆಲೆ ಮೇಲೆಯೂ ದಾಳಿ ನಡೆಸಿ ಧ್ವಂಸ ಮಾಡಿತ್ತು.
ಭವಿಷ್ಯದಲ್ಲಿ ಭಾರತ ದಾಳಿ ಮಾಡಬಹುದು ಎಂಬ ಭೀತಿ ಎದುರಿಸುತ್ತಿರುವ ಪಾಕಿಸ್ತಾನ ಸೇನೆ ತನ್ನ ಪ್ರಧಾನ ಕಚೇರಿಯನ್ನು ಇಸ್ಲಾಮಾಬಾದ್‌ಗೆ ಸ್ಥಳಾಂತರಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.
ಇಸ್ಲಾಮಾಬಾದ್‌ನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ರಾವಲ್ಪಿಂಡಿಯ (Rawalpindi) ಚಕ್ಲಾಲಾ ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ GHQ ಪಕ್ಕದಲ್ಲಿದೆ ಮತ್ತು ಪ್ರಮುಖ ಸಾರಿಗೆ ವಿಮಾನಗಳು, ಕಣ್ಗಾವಲು ವ್ಯವಸ್ಥೆಗಳು ಮತ್ತು ಇಂಧನ ತುಂಬುವ ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?
ತನ್ನ ಸೇನಾ ಜನರಲ್ ಪ್ರಧಾನ ಕಚೇರಿಯ ಜೊತೆ ಸೇನಾ ಮುಖ್ಯಸ್ಥರ ನಿವಾಸವನ್ನು ಸಹ ಸ್ಥಳಾಂತರಿಸಲಾಗುತ್ತದೆ ಎಂದು ವರದಿಯಾಗಿದೆ.
ಭಾರತದ ದಾಳಿಗೆ ಬೆದರಿದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ (Asim Munir) ಜೀವಭಯದಿಂದ ಸೇನಾ ಬಂಕರ್ (Bunker) ಒಳಗಡೆ ಅಡಗಿದ್ದ ವಿಚಾರ 4 ದಿನ ಹಿಂದೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: IMF ಸಾಲವನ್ನು ಪಾಕ್ ಪರೋಕ್ಷವಾಗಿ ಭಯೋತ್ಪಾದನೆಗೆ ಬಳಸ್ತಿದೆ – ರಾಜನಾಥ್ ಸಿಂಗ್
ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ನೆಲೆಯ ಮೇಲೆ ದಾಳಿ ನಡೆಸಿದ ನಂತರ ಮುಂದೆ ಭಾರತ ತನ್ನ ಮೇಲೂ ದಾಳಿ ನಡೆಸಬಹುದು ಎಂದು ಭಾವಿಸಿ ಮುನೀರ್ ಜನರಲ್ ಹೆಡ್‌ಕ್ವಾರ್ಟರ್ಸ್ (ಜಿಎಚ್‌ಕ್ಯು) ನಲ್ಲಿರುವ ಕೋಟೆಯ ಬಂಕರ್ ಒಳಗಡೆ ಅಡಗಿದ್ದರು ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಬಂದಿದೆ. ಸುಮಾರು 2 ರಿಂದ 3 ಗಂಟೆಗಳ ಕಾಲ ಮುನೀರ್ ಬಂಕರ್ ಒಳಗಡೆಯೇ ಇದ್ದರು. ಪರಿಸ್ಥಿತಿ ಸುಧಾರಿಸಿದ ಬಳಿಕ ಮುನೀರ್ ಹೊರಗಡೆ ಬಂದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.