ಗಾಂಧೀನಗರ: ಕಳೆದ 2 ತಿಂಗಳಿಂದ ನನ್ನ ಅವಳಿ ಮಕ್ಕಳು ಕಾಣೆಯಾಗಿದ್ದಾರೆಂದು ಗುಜರಾತ್ (Gujarat) ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ವ್ಯಕ್ತಿಯೊಬ್ಬ ಪತ್ರ ಬರೆದಿರುವ ಘಟನೆ ನಡೆದಿದೆ.
ವಡೋದರ (Vadodara) ನಿವಾಸಿ ಚಿಮನ್ ಎಂಬಾತನ ಮಕ್ಕಳಾದ ಪದವಿ ಓದುತ್ತಿರುವ ಶೀತಲಾ ಹಾಗೂ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವ ಸರಿಕಾ ಕಾಣೆಯಾಗಿರುವ ಅವಳಿ ಸಹೋದರಿಯರು. ಎಂದಿನಂತೆ ಕಾಲೇಜಿಗೆ ಹೋಗಿದ್ದ ಇಬ್ಬರು ಸಹೋದರಿಯರು ಫೆ.17 ರಿಂದ ನಾಪತ್ತೆಯಾಗಿದ್ದಾರೆ. ಮಕ್ಕಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದ ತಂದೆ ಕೊನೆಗೆ ಸಯಾಜಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ
Advertisement
Advertisement
ಆದರೆ, 25 ದಿನಗಳು ಕಳೆದರೂ ಪೊಲೀಸರಿಂದ ಯಾವುದೇ ತೃಪ್ತಿಕರ ಉತ್ತರ ಸಿಗದ ಕಾರಣ ಚಿಮನ್ ನಂತರ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದರು. ಪ್ರಕರಣವನ್ನು ವಡೋದರಾ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಯಿತು.
Advertisement
51 ದಿನಗಳು ಕಳೆದರೂ ಅವರ ಇಬ್ಬರು ಪುತ್ರಿಯರ ಗುರುತು ಪತ್ತೆಯಾಗದ ಕಾರಣ ಹತಾಶರಾದ ಚಿಮನ್ ಈಗ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಮತ್ತು ಗೃಹ ಸಚಿವ ಹರ್ಷ ಶಾಂಘ್ವಿಗೆ (Harsh Shanghvi) ಪತ್ರ ಬರೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಸಹೋದರಿಯರ ವಾಟ್ಸ್ ಆ್ಯಪ್ ಚಾಟ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಭೇಟೆ – ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ
Advertisement
ನನ್ನ ಇಬ್ಬರು ಮಕ್ಕಳ ಬಗ್ಗೆ ಇನ್ನೂ ಕುರುಹು ಸಿಕ್ಕಿಲ್ಲ. ಅವರ ಬಗ್ಗೆ ಪೊಲೀಸರಿಂದ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದೇನೆ. ನಿತ್ಯ ಆತಂಕದಿಂದಲೇ ದಿನ ದೂಡುತ್ತಿದ್ದೇನೆ ಎಂದು ನಾಪತ್ತೆಯಾಗಿರುವ ಸಹೋದರಿಯರ ತಂದೆ ನೊಂದು ನುಡಿದಿದ್ದಾರೆ.