ತುಮಕೂರು: ಹೆಲ್ಮೆಟ್ (Helmet) ಆಯ್ತು, ಈಗ ಜೆಡಿಎಸ್ (JDS) ಮುಖಂಡ ಆರ್. ಉಗ್ರೇಶ್ (R Ugresh) ಅವರು ಬಾಳೆ ಹಣ್ಣು ಭಾಗ್ಯ ಕರುಣಿಸಿದ್ದಾರೆ.
ಹೌದು. ಹುಟ್ಟು ಹಬ್ಬದ ಪ್ರಯುಕ್ತ ಉಗ್ರೇಶ್ ಅವರು ಹಣ್ಣು ಹಂಪಲು ಹಂಚಿದ್ದಾರೆ. ಅಂತೆಯೇ ಹಣ್ಣು ಕೊಂಡೊಯ್ಯಲು ಜನ ಮುಗಿಬಿದ್ದಿದ್ದಾರೆ. ಸಿಕ್ಕಿದ್ದೇ ಸೀರುಂಡೆ ಎಂದು ಅಭಿಮಾನಿಗಳು ಬಾಳೆ ಗೊನೆಯನ್ನೇ ಹೊತ್ತೊಯ್ದ ಪ್ರಸಂಗ ನಡೆದಿದೆ.
ಶಿರಾ ಕ್ಷೇತ್ರ (Sira Assembly constituency) ದ ಜೆಡಿಎಸ್ (JDS) ಟಿಕೆಟ್ ಆಕಾಂಕ್ಷಿಯೂ ಆದ ಉಗ್ರೇಶ್, ಕಳೆದ ತಿಂಗಳು ಹೆಲ್ಮೆಟ್ ಹಂಚಿ ಸುದ್ದಿಯಲ್ಲಿದ್ದರು. ಟಿಕೆಟ್ ಗಾಗಿ ಮೂರ್ನಾಲ್ಕು ಮುಖಂಡರಲ್ಲಿ ಫೈಟ್ ನಡೆಯುತ್ತಿದ್ದು, ಅದರಲ್ಲಿ ಉಗ್ರೇಶ್ ಮುಂಚೂಣಿಯಲಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ವೋಟರ್ ಐಡಿ ಗೋಲ್ಮಾಲ್ – ಸ್ಥಳೀಯ ಶಾಸಕರ ಮೇಲೆ ಕಾಂಗ್ರೆಸ್ ಆರೋಪ
ಇದೀಗ ಹುಟ್ಟು ಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದು, ಕಾರು, ಬೈಕಲ್ಲಿ ಶಿರಾ ಜನತೆ ಬಾಳೆಗೊನೆ ಎಸ್ಕೇಪ್ ಮಾಡಿದ್ದಾರೆ. ಶಿರಾ ನಗರದಲ್ಲಿ ರ‍್ಯಾಲಿ ನಡೆಸಿ, ಅಭಿಮಾನಿಗಳು ಉಗ್ರೇಶ್ ಅವರಿಗೆ ಜೆಸಿಬಿ ಮೂಲಕ ಪುಷ್ಪವೃಷ್ಠಿ ಮಾಡಿದರು.