ರಾಯಚೂರು: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಸಾಂಕ್ರಾಮಿಕ ರೋಗಗಳು ಶುರುವಾಗಿದೆ.
ರಿಮ್ಸ್ ಆಸ್ಪತ್ರೆಗೆ ಪ್ರತಿನಿತ್ಯ 300 ಹೊರರೋಗಿಗಳು ಬರುತ್ತಿದ್ದು, ಇದರಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳೇ ಹೆಚ್ಚಾಗಿವೆ. ಇದುವರೆಗೆ 63 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಪ್ರತಿನಿತ್ಯ 250 ರಿಂದ 300 ರೋಗಿಗಳ ರಕ್ತ ಪರೀಕ್ಷೆ ನಡೆದಿದೆ.
Advertisement
ತಗ್ಗು ಪ್ರದೇಶದಲ್ಲಿ ನಿಲ್ಲುವ ನೀರಿನಲ್ಲಿ ಸೊಳ್ಳೆಗಳು ಬೆಳೆದು ಚಿಕೂನ್ ಗುನ್ಯಾ, ಮಲೇರಿಯಾ, ಅತಿಸಾರದಂತ ರೋಗಗಳಿಗೆ ಕಾರಣವಾಗ್ತಿದೆ. ಮಾನ್ವಿ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ, ಲಿಂಗಸುಗೂರು ಭಾಗದಲ್ಲಿ ಮಲೇರಿಯಾ ಹೆಚ್ಚು ಬಾಧಿಸುತ್ತಿದೆ.
Advertisement
ಬೆಳೆ ಉಳಿಸಿಕೊಳ್ಳಲು ಕ್ರಿಮಿನಾಶಕ ಹೊಡೆದು ಉಸಿರಾಟ ತೊಂದರೆ ಅನುಭವಿಸುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ.