Connect with us

Cricket

ಹೆಣ್ಣುಮಕ್ಕಳನ್ನ ಸಶಕ್ತರನ್ನಾಗಿ ಮಾಡ್ಬೇಕು, ಗರ್ಭದಲ್ಲೇ ಕೊಲ್ಲಬಾರ್ದು- ಹರ್ಮನ್‍ಪ್ರೀತ್ ಕೌರ್ ತಾಯಿ

Published

on

ನವದೆಹಲಿ: ಗುರುವಾರದಂದು ನಡೆದ ಐಸಿಸಿ ಮಹಿಳಾ ವಿಶ್ವಕಪ್‍ನ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹರ್ಮನ್‍ಪ್ರೀತ್ ಕೌರ್ ಅವರ ತಾಯಿ ಎಲ್ಲರಿಗೂ ಸಂದೇಶವೊಂದನ್ನ ನೀಡಿದ್ದಾರೆ.

ಹೆಣ್ಣುಮಕ್ಕಳನ್ನ ಸಶಕ್ತರನ್ನಾಗಿ ಮಾಡ್ಬೇಕು. ಗರ್ಭದಲ್ಲಿಯೇ ಕೊಲ್ಲಬಾರದು. ನನ್ನ ಮಗಳು ದೇಶಕ್ಕೆ ಹೆಮ್ಮೆ ತಂದಿರುವಂತೆ ಇತರೆ ಹೆಣ್ಣುಮಕ್ಕಳನ್ನೂ ಪ್ರೋತ್ಸಾಹಿಸಬೇಕು ಅಂತ ಹರ್ಮನ್ ಪ್ರೀತಿ ತಾಯಿ ಹೇಳಿದ್ದಾರೆ.

ಹರ್ಮನ್‍ಪ್ರೀತ್ ಅವರ ಪಂಜಾಬ್‍ನ ಮೋಗಾದಲ್ಲಿರೋ ಮನೆಯಲ್ಲಿ ಸಂಭ್ರಮದ ನಡುವೆ ಅವರ ತಂದೆ ಹರ್ಮಿಂದರ್ ಸಿಂಗ್ ಕೂಡ ಮಾತನಾಡಿದ್ರು. ಆಕೆ ಮುಂದೆ ಇನ್ನೂ ಚೆನ್ನಾಗಿ ಆಟವಾಡಿ, ವಿಶ್ವ ಕಪ್ ಗೆದ್ದು ಭಾರತಕ್ಕೆ ಹೆಮ್ಮೆ ತರಬೇಕು ಅಂತ ಹೇಳಿದ್ರು.

ಇದನ್ನೂ ಓದಿ: 90 ಎಸೆತದಲ್ಲಿ ಶತಕ, 115 ಎಸೆತದಲ್ಲಿ 171 ರನ್: ಆಸೀಸ್ ವಿರುದ್ಧ ಸಿಡಿದ ಹರ್ಮನ್ ಪ್ರೀತ್

ಆಕೆ ಚಿಕ್ಕಂದಿನಿಂದಲೂ ಹುಡುಗರ ಜೊತೆ ಕ್ರಿಕೆಟ್ ಆಡುತ್ತಾ ಬಂದಿದ್ದಾಳೆ. ಆಕೆಯ ರನ್‍ಗಳ ಹಸಿವು ಸಾಯುವುದಿಲ್ಲ. ಇದು ಆಕೆಯ ಸ್ಟ್ರೈಕ್ ರೇಟ್‍ನಲ್ಲಿ ಕಾಣಿಸುತ್ತದೆ. ಅವಳು ಯಾವಾಗ್ಲೂ ಪಾಸಿಟವ್ ಆಗಿರ್ತಾಳೆ. ಮೈದಾನದಲ್ಲಿ ವಿರಾಟ್ ಕೊಹ್ಲಿಯಂತೆ ವರ್ತಿಸುತ್ತಾಳೆ. ಅವರಂತೆಯೇ ಆಕ್ರಮಣಕಾರಿ. ಆದ್ರೆ ಬೇರೆ ಕಡೆ ಇದ್ದಾಗ ಆಕೆ ತುಂಬಾ ಮೌನವಾಗಿ ಹಾಗೂ ಗಂಭೀರವಾಗಿರ್ತಾಳೆ. ತನ್ನ ಯೌವ್ವನಾವಸ್ಥೆಯಿಂದ್ಲೂ ವಿರೇಂದ್ರ ಸೆಹ್ವಾಗ್ ಅವರನ್ನ ಮಾದರಿಯಾಗಿ ಇಟ್ಟುಕೊಂಡಿದ್ದಾಳೆ. ಅವರಂತೆಯೇ ಬ್ಯಾಟಿಂಗ್ ಮಾಡ್ತಾಳೆ ಎಂದು ಹರ್ಮನ್‍ಪ್ರೀತಿ ಸಹೋದರಿ ಹೇಳಿದ್ದಾರೆ.

ಭಾರತದ ಮಹಿಳಾ ಕ್ರಿಕೆಟ್ ತಂಡದ ವೈಸ್ ಕ್ಯಾಪ್ಟನ್ ಆಗಿರೋ ಹರ್ಮನ್‍ಪ್ರೀತ್ ಕೌರ್ ಗುರುವಾರದಂದು ನಡೆದ ಪಂದ್ಯದಲ್ಲಿ 115 ಎಸೆತಗಳಿಗೆ 171 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ಬೌಲರ್‍ಗಳನ್ನೇ ಮೂಕವಿಸ್ಮಿತರನ್ನಾಗಿ ಮಾಡಿದ್ರು. ಹರ್ಮನ್‍ಪ್ರೀತ್ ಅವರ ಅಜೇಯ 171 ರನ್ ವಿಶ್ವಕಪ್ ನಾಕ್‍ಔಟ್ ಮ್ಯಾಚ್‍ನಲ್ಲಿ ಭಾರತೀಯ ಆಟಗಾರರೊಬ್ಬರು ಗಳಿಸಿರೋ ಅತ್ಯಂತ ಹೆಚ್ಚಿನ ರನ್.

ಇದನ್ನೂ ಓದಿ: ಭಾರತಕ್ಕೆ 36 ರನ್ ಗಳ ಜಯ : ಫೈನಲಿಗೆ ಎಂಟ್ರಿ

https://twitter.com/AkashKu64782024/status/888073567191146496

Click to comment

Leave a Reply

Your email address will not be published. Required fields are marked *