ಬೆಂಗಳೂರು: ಹಲಾಲ್, ಜಟ್ಕಾ, ಮ್ಯಾಂಗೋ ವಾರ್ ಬಳಿಕ ಇದೀಗ ಇನ್ನೊಂದು ವಾರ್ ಆರಂಭವಾಗಿದೆ. ಹಿಂದೂ ಸಂಘಟನೆಗಳಿಂದ ಅಕ್ಷಯ ತೃತೀಯ ಅಭಿಯಾನ ಶುರುವಾಗಿದ್ದು, ಹಿಂದೂಗಳ ಬಳಿಯೇ ಚಿನ್ನ ಖರೀದಿಗಾಗಿ ಕ್ಯಾಂಪೈನ್ ಆರಂಭವಾಗಿದೆ.
Advertisement
ಹೌದು. ಇದೀಗ ರಾಜ್ಯದಲ್ಲಿ ಧಾರ್ಮಿಕ ದಂಗಲ್ ಮತ್ತೆ ಮುಂದುವರಿದಿದೆ. ಹಿಜಾಬ್ ನಿಂದ ಶುರುವಾದ ಧಾರ್ಮಿಕ ದಂಗಲ್, ಈಗ ಅಕ್ಷಯ ತೃತೀಯ ಹಬ್ಬಕ್ಕೂ ನಂಟು ಹೊಂದಿಸುತ್ತಿದೆ. ಯುಗಾದಿಯಲ್ಲಿ ಹೇಗೆ ಹಲಾಲ್ ಕಟ್ ವಿರೋಧಿಸಿದ್ರೋ ಹಾಗೇಯ ಮತ್ತೊಂದು ಅಭಿಯಾನ ಶುರುವಿಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡವೆಂದ ಬಿಎಸ್‌ವೈ
Advertisement
Advertisement
ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡೋರ ಸಂಖ್ಯೆ ಹೆಚ್ಚು. ಅದಕ್ಕಾಗಿ ಅಕ್ಷಯ ತೃತೀಯ ದಿನ ಹಿಂದೂಗಳ ಚಿನ್ನದಂಗಡಿಯಲ್ಲೇ ಚಿನ್ನ ಖರೀದಿಸಿ. ಚಿನ್ನ ಖರೀದಿ ಮಾಡುವಾಗ ಯಾವ ಧರ್ಮದವರು ಅಂಗಡಿ ಅಂತ ನೋಡಿ ಖರೀದಿಸಿ. ಅನ್ಯ ಧರ್ಮದವರ ಬಳಿ ಚಿನ್ನ ಖರೀದಿ ಬೇಡವೇ ಬೇಡ ಎಂಬ ಹೊಸ ಅಭಿಯಾನ ಶುರುವಾಗಿದೆ.
Advertisement
ಮುಸ್ಲಿಂ ಜ್ಯುವೆಲ್ಲರಿ ಬಳಿ ಚಿನ್ನ ಖರೀದಿಸದಂತೆ ಹಿಂದೂ ಸಂಘಟನೆಗಳು ಕರೆ ನೀಡಿವೆ. ಈ ಟ್ವಿಟ್ಟರ್ ಅಭಿಯಾನಕ್ಕೆ ಶ್ರೀರಾಮಸೇನೆ ಬೆಂಬಲ ನೀಡಿದೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ