ಮುಂಬೈ: ದೇಶದಲ್ಲಿ ಪ್ಲಾಸ್ಟಿಕ್ ಅವಶೇಷಗಳು ಅತ್ಯಂತ ಹೆಚ್ಚಿರುವ ಬೀಚ್ ಗಳ ಪೈಕಿ ಗೋವಾ ಮೊದಲ ಸ್ಥಾನವನ್ನು ಪಡೆದುಕೊಂಡ್ರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರವೊಂದನ್ನು ಸಂಶೋಧನಾ ವರದಿಯಿಂದಾಗಿ ಬಹಿರಂಗಗೊಂಡಿದೆ.
ಕೊಚ್ಚಿಯ ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್‍ಆರ್ ಐ)ಯು ಈ ವರದಿ ನೀಡಿದೆ. ದೇಶದಲ್ಲಿ 7,516 ಕಿ.ಮೀ ಕರಾವಳಿ ತೀರ ಹೊಂದಿರುವ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 254 ಬೀಚ್ ಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ವರದಿಯನ್ನು ತಯಾರಿಸಲಾಗಿದೆ.
Advertisement
Advertisement
ಪ್ಲಾಸ್ಟಿಕ್ ಅವಶೇಷ: ಗೋವಾದ ಬಳಿಕ ಕರ್ನಾಟಕದ 33 ಬೀಚ್ ಗಳಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ಅವಶೇಷಗಳಿವೆ. ಇಲ್ಲಿನ ಪ್ರತಿ 1 ಮೀಟರ್ ಮರಳಿನಲ್ಲಿ 21.91 ಗ್ರಾಂನಷ್ಟು ಪ್ಲಾಸ್ಟಿಕ್ ಅವಶೇಷಗಳು ದೊರೆಯುತ್ತವೆ. ಇನ್ನು ನಂ.1 ಸ್ಥಾನದಲ್ಲಿರುವ ಗೋವಾ ಬೀಚ್ ಗಳಲ್ಲಿ ಪ್ರತಿ 1 ಮೀಟರ್ ಮರಳಿನಲ್ಲಿ ಸರಾಸರಿ 25.47 ಗ್ರಾಂ ಪ್ಲಾಸ್ಟಿಕ್ ಇದೆ. ಇನ್ನು ಈ ಪಟ್ಟಿಯಲ್ಲಿ ಗುಜರಾತ್ ಮೂರನೇ ಸ್ಥಾನದಲ್ಲಿದ್ದು, ಅಲ್ಲಿ ಪ್ರತಿ 1 ಮೀಟರ್ ಮರಳಿನಲ್ಲಿ 12.62 ಗ್ರಾಂ ಪ್ಲಾಸ್ಟಿಕ್ ಇದೆ ಎಂದು ವರದಿಯಲ್ಲಿ ಮಾಹಿತಿಯಿದೆ.
Advertisement
Advertisement
ಗೋವಾದಲ್ಲಿ ನೈಲಾನ್ ಫಿಶಿಂಗ್ ನೆಟ್, ಗ್ಲಾಸ್, ಇ-ತ್ಯಾಜ್ಯ, ಥರ್ಮೋಕೋಲ್ ಮುಂತಾದ ಹಾನಿಕಾರ ವಸ್ತುಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳ ಪ್ರಮಾಣ 205.27 ಗ್ರಾಂ ಇದೆ.
ಕಸದ ಪ್ರಮಾಣ ಕರ್ನಾಟಕದಲ್ಲಿ ಹೆಚ್ಚು: ಕಸದ ಪ್ರಮಾಣ ಕರ್ನಾಟಕದ ಬೀಚ್ ಗಳಲ್ಲೇ ಹೆಚ್ಚಿದ್ದು, ಅದು ಪ್ರತಿ ಮೀಟರ್ ಗೆ 178.44 ಗ್ರಾಂನಷ್ಟಿದೆ. ಗುಜರಾತ್ ನಲ್ಲಿ ಕಸದ ಪ್ರಮಾಣ ಪ್ರತಿ ಮೀಟರ್ ಗೆ 90.56 ಗ್ರಾಂನಷ್ಟಿದೆ. ಪ್ಲಾಸ್ಟಿಕ್ ಕೈ ಚೀಲಗಳು, ಹರಿದ ಮೀನಿನ ಬಲೆ, ಹಾಲಿನ ಪ್ಯಾಕ್ ಗಳು, ತೈಲ, ಟೂತ್ ಪೇಸ್ಟ್, ಪಿಇಟಿ ಬಾಟಲ್ ಗಳು ಬೀಚ್ ಗಳಲ್ಲಿ ಕಂಡು ಬರುವ ಪ್ರಮುಖ ಪ್ಲಾಸ್ಟಿಕ್ ವಸ್ತುಗಳಾಗಿವೆ. ಇವುಗಳು ಸಮುದ್ರದಲ್ಲಿ ವಾಸಿಸುವ ಜಲಚರಗಳಿಗೆ ತುಂಬಾ ಅಪಾಯಕಾರಿ ಎಂದು ಅಧ್ಯಯನ ತಂಡ ತಿಳಿಸಿದೆ.
12 ಮಂದಿಯ ತಂಡ ದೇಶದ 254 ಬೀಚ್ ಗಳಲ್ಲಿ ಈ ಅಧ್ಯಯನ ನಡೆಸಿ ವರದಿಯನ್ನು ತಯಾರಿಸಿದೆ.