ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಇಂದಿನಿಂದ ಎಲ್‍ಪಿಜಿ ಸಿಲಿಂಡರ್ ದರ ಕೂಡ ಏರಿಕೆಯಾಗಿದೆ.
ಸಬ್ಸಿಡಿ ಸಿಲಿಂಡರ್ ಮೇಲೆ 2.34 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಮೇಲೆ 48 ರೂ. ನಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ದೆಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಬೆಲೆ 493.55 ರೂ. ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 698.50 ರೂ ಆಗಿದೆ.
Advertisement
ಕೋಲ್ಕತ್ತಾ ದಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ 496.65 ರೂ. ಮತ್ತು ಸಬ್ಸಿಡಿ ರಹಿತ ಬೆಲೆ 723.50 ರೂ ಆಗಿದ್ದು, ಮುಂಬೈ ನಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ 491.31 ರೂ. ಮತ್ತು ಸಬ್ಸಿಡಿ ರಹಿತ ಬೆಲೆ 671.50 ರೂ ಆಗಿದೆ. ಚೆನ್ನೈ ನಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ 481.84 ರೂ. ಮತ್ತು ಸಬ್ಸಿಡಿ ರಹಿತ ಬೆಲೆ 712.50 ರೂ ಆಗಿದೆ.
Advertisement
ವರ್ಷಕ್ಕೆ 12 ಸಿಲಿಂಡರ್ ಗಳನ್ನು ಸಬ್ಸಿಡಿ ರೂಪದಲ್ಲಿ ಪಡೆಯಬಹುದು. 12 ಕ್ಕಿಂತ ಹೆಚ್ಚು ಸಿಲಿಂಡರ್ ಪಡೆದಲ್ಲಿ ಅದಕ್ಕೆ ಸಬ್ಸಿಡಿ ರಹಿತ ಬೆಲೆ ಪಾವತಿಸಬೇಕಾಗುತ್ತದೆ.
Advertisement
ಕಳೆದ ತಿಂಗಳಿನಲ್ಲಿ ಸತತ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಎರಡು ದಿನಗಳಿಂದ ಸ್ವಲ್ಪ ಇಳಿಮುಖವಾಗಿತ್ತು. ಒಂದು ಲೀಟರ್ ಪೆಟ್ರೋಲ್ ಮೇಲೆ 5 ಪೈಸೆ, ಡೀಸೆಲ್ ಮೇಲೆ 6 ಪೈಸೆ ಕಡಿಮೆಯಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 78.29 ರೂ ಆಗಿದ್ದು ಡೀಸೆಲ್ ಬೆಲೆ 69.20 ರೂ ಆಗಿದೆ.