ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಉತ್ತರ ಪ್ರದೇಶದಲ್ಲಿ ಉಚಿತ ಪಡಿತರ ನಂತರ, ಉಚಿತ ಊಟ ನೀಡಲು ಸರ್ಕಾರ ಸಿದ್ಧತೆ ಮಾಡಲಾಗುತ್ತಿದೆ.
ಯೋಗಿ ಆದಿತ್ಯನಾಥ್ ಮೊದಲ ಸಂಪುಟ ಸಭೆಯಲ್ಲಿ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ್ದರು. ಇದೀಗ ಬಡವರು ಮತ್ತು ವಂಚಿತರಿಗೆ ಉಚಿತ ಅಥವಾ ಹೆಚ್ಚಿನ ಸಬ್ಸಿಡಿಯೊಂದಿಗೆ ಊಟ ನೀಡುವ ಸಲುವಾಗಿ ರಾಜ್ಯಾದ್ಯಂತ ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸುವ ಯೋಜನೆ ಹೋದಿದ್ದಾರೆ.
Advertisement
Advertisement
ಉತ್ತರ ಪ್ರದೇಶ ಸರ್ಕಾರ 2020ರಿಂದ ಪ್ರತಿ ತಿಂಗಳು 15 ಕೋಟಿ ಫಲಾನುಭವಿಗಳಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 1 ಕೆಜಿ ಸಂಪೂರ್ಣ ಚನಾ, 1 ಲೀಟರ್ ಅಡಿಗೆ ಎಣ್ಣೆ, 1 ಕೆಜಿ ಉಪ್ಪು ಜೊತೆಗೆ 5 ಕೆಜಿ ಗೋಧಿ ಮತ್ತು ಅಕ್ಕಿಯನ್ನು ಒಳಗೊಂಡ ಪ್ಯಾಕ್ ನೀಡಲಾಗುತ್ತಿದೆ.
Advertisement
Advertisement
ಉಚಿತ ಊಟ: ಅಧಿಕೃತ ಮೂಲಗಳ ಪ್ರಕಾರ, ಯೋಗಿ ಸರ್ಕಾರವು ಬಡವರಿಗೆ ಉಚಿತವಾಗಿ ಅಥವಾ ಅತ್ಯಲ್ಪ ಬೆಲೆಯಲ್ಲಿ ಬೇಯಿಸಿದ ಪೌಷ್ಟಿಕಾಂಶದ ಆಹಾರವನ್ನು ಒದಗಿಸಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ. ಈ ಸಂಬಂಧ ಈ ವಾರದಲ್ಲೇ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಯೋಜನೆ ಪ್ರಾರಂಭಿಸುವ ವಿಧಾನಗಳನ್ನು ವಿವರಿಸಲಾಗುವುದು ಮತ್ತು ಸಮುದಾಯ ಅಡುಗೆಮನೆಗಳನ್ನು ನಡೆಸುವಲ್ಲಿ ವಿವಿಧ ಇಲಾಖೆಗಳಿಗೆ ವಿಭಿನ್ನ ಪಾತ್ರಗಳನ್ನು ನೀಡಬಹುದು ಎಂದು ಮೂಲಗಳು ತಿಳಿಸಿವೆ.