4 ವರ್ಷದಿಂದ ಪೊಲೀಸರ ವಶದಲ್ಲಿದ್ದ 3 ಆಮೆಗಳು ಬಿಡುಗಡೆ

Public TV
1 Min Read
tortoises

ರಾಯ್‍ಪುರ: ನಾಲ್ಕು ವರ್ಷಗಳಿಂದ ಪೊಲೀಸರ ವಶದಲ್ಲಿದ್ದ 3 ಆಮೆಗಳನ್ನು ಛತ್ತೀಸ್‍ಗಢದ ರಾಜನಂದಗಾಂವ್ ಜಿಲ್ಲಾ ನ್ಯಾಯಾಲಯ ಆದೇಶದ ಮೇರೆಗೆ ಇಂದು ಬಿಡುಗಡೆ ಮಾಡಲಾಗಿದೆ.

2015ರಲ್ಲಿ ಈ ಆಮೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 6 ಮಂದಿ ಮಾಂತ್ರಿಕರು ಮಾಟಮಂತ್ರಕ್ಕಾಗಿ ಈ ಆಮೆಗಳನ್ನು ಬಳಸುತ್ತಿದ್ದರು. ಈ ಹಿನ್ನೆಲೆಯಲ್ಲಿ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅವರ ಜೊತೆಗೆ ಈ ಮೂರು ಆಮೆಗಳನ್ನು ಕೂಡ ವಶಕ್ಕೆ ಪಡೆದಿದ್ದರು. ಕಳೆದ 4 ವರ್ಷಗಳಿಂದ ಪೊಲೀಸ್ ಠಾಣೆಯಲ್ಲಿ ಪ್ಲಾಸ್ಟಿಕ್ ಟ್ಯಾಂಕಿನಲ್ಲಿ ಆಮೆಗಳನ್ನು ಇರಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ರಾಜನಂದಗಾಂವ್ ಜಿಲ್ಲಾ ನ್ಯಾಯಾಲಯ ವಶಕ್ಕೆ ಪಡೆದಿರುವ ಆಮೆಗಳನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಆದೇಶಿಸಿದೆ. ಈ ಹಿನ್ನೆಲೆ ಇಷ್ಟು ದಿನ ಪೊಲೀಸರ ವಶದಲ್ಲಿದ್ದ ಆಮೆಗಳಿಗೆ ಬಿಡುಗಡೆ ಭಾಗ್ಯ ಬಂದಿದೆ. ಆಮೆಗಳನ್ನು ಪೊಲೀಸರು ವನ್ಯಜೀವಿ ಇಲಾಖೆಗೆ ಒಪ್ಪಿಸಿದ್ದು, ಇಲಾಖೆ ಸಿಬ್ಬಂದಿ ಆಮೆಗಳನ್ನು ಶಿವನಾಥ್ ನದಿಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *