5 ವರ್ಷದ ಬಳಿಕ ಟಿಬಿ ಡ್ಯಾಂ ಭರ್ತಿ-ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

Public TV
1 Min Read
KPL RIVER 1

ಕೊಪ್ಪಳ: ಐದು ವರ್ಷದ ನಂತರ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಬುಧವಾರ ಸಂಜೆ ಜಲಾಶಯದ ಗೇಟ್ ಮೂಲಕ ನೀರು ಹೊರ ಬಿಡಲಾಯಿತು.

ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಜನರ ಜೀವನಾಡಿ ತುಂಗಭದ್ರಾ ಜಲಾಶಯ ಕಳೆದ 5 ವರ್ಷದಿಂದ ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜೂನ್ ಎರಡನೇ ವಾರದಲ್ಲಿ ಡ್ಯಾಂ ಭರ್ತಿಯಾಗಿರುವುದು ರೈತರಲ್ಲಿ ಹರ್ಷ ತಂದಿದೆ.

river

ಬುಧವಾರ ಸಂಜೆ ತುಂಗಭದ್ರಾ ಬೋರ್ಡ್ ನ ಕಾರ್ಯದರ್ಶಿ ಡಿ. ರಂಗಾರೆಡ್ಡಿ ಗೇಟ್ ಎತ್ತುವ ಮೂಲಕ ನದಿಗೆ ನೀರು ಹರಿಸಿದ್ದಾರೆ. ಸುಮಾರು 10 ಗೇಟ್ ತೆಗೆಯುವ ಮೂಲಕ 30 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಸಾಮಾನ್ಯವಾಗಿ ಡ್ಯಾಂ ಆಗಸ್ಟ್ ನಲ್ಲಿ ಭರ್ತಿಯಾಗುತ್ತಿತ್ತು. ಜಲಾಶಯದ ಇತಿಹಾಸದಲ್ಲಿ ಕೇವಲ 8 ಬಾರಿ ಮಾತ್ರ ಜುಲೈನಲ್ಲೇ ಭರ್ತಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *