Breaking:ದೊಡ್ಮನೆಯಿಂದ ಭಾಗ್ಯಶ್ರೀ ಔಟ್

Public TV
1 Min Read
bhagyashree 1

ಬಿಗ್ ಬಾಸ್ ಮನೆಯ (Bigg Boss House) ಆಟ 6ನೇ ವಾರ ಪೂರೈಸಿ 7ನೇ ವಾರದತ್ತ ಮುನ್ನುಗ್ಗುತ್ತಿದೆ. ಈ ವಾರ ಮನೆಮಂದಿಗೆ ಡಬಲ್ ಎಲಿಮಿನೇಷನ್ ಜೊತೆ ಡಬಲ್ ಶಾಕ್ ಕೊಟ್ಟಿದೆ. ಇಶಾನಿ (Eshani) ಎಲಿಮಿನೇಷನ್ ಬೆನ್ನಲ್ಲೇ ಭಾಗ್ಯಶ್ರೀ ಕೂಡ ಬಿಗ್‌ ಬಾಸ್‌ ಔಟ್‌ ಆಗಿದ್ದಾರೆ.‌ ಇದನ್ನೂ ಓದಿ:Bigg Boss: ಲವ್‌ ಯೂ ಎಂದ ಸಂಗೀತಾ- ನಾಚಿ ನೀರಾದ ಕಾರ್ತಿಕ್‌

Bhagyashree 3

ಈ ಹಿಂದೆ ಎರಡೆರೆಡು ಬಾರಿ ಎಲಿಮಿನೇಷನ್ (Elimination) ಪ್ರಕ್ರಿಯೆ ಮಿಸ್ ಆಗಿತ್ತು. ಈ ವಾರ ಇಬ್ಬರೂ ಸ್ಪರ್ಧಿಗಳು ಮನೆಯಿಂದ ಔಟ್ ಆಗಿದ್ದಾರೆ. ಈ ಬಾರಿ ವಾರಾಂತ್ಯದ ಮೊದಲ ಪಂಚಾಯಿತಿಯಲ್ಲೇ ಕಿಚ್ಚ ಎಲಿಮಿನೇಷನ್ ಶಾಕ್ ಕೊಟ್ಟರು. ಇಶಾನಿ ಕಳಪೆ ಆಟದಿಂದ ಬಿಗ್ ಬಾಸ್ ಮನೆಯಿಂದಲೇ (Bigg Boss House) ಗೇಟ್ ಪಾಸ್ ಸಿಕ್ಕಿದ್ರೆ, ಭಾನುವಾರ ಭಾಗ್ಯ ಅವರ ಆಟ ಅಂತ್ಯವಾಗಿದೆ.

bhagyashreeದಸರಾ ಹಬ್ಬವಿದ್ದ ಕಾರಣ ಭಾಗ್ಯಶ್ರೀ ಅವರು ಅಂದು ಜಸ್ಟ್ ಮಿಸ್ ಆಗಿದ್ದರು. ಎಲಿಮಿನೇಷನ್ ಬಿಸಿ ಇಟ್ಟಿದ ಮೇಲೆ ಭಾಗ್ಯ ಅವರು ಎಚ್ಚೆತ್ತುಕೊಂಡಿದ್ದರು. ಅದಾದ ಬಳಿಕ ಮನೆಯಲ್ಲಿ ಸಖತ್ ಆಗಿ ಭಾಗ್ಯ ಅವರು ಆಟ ಆಡಿದ್ದರು.

bhagyashree 2ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ರೂ, ಭಾಗ್ಯಶ್ರೀ ಅವರು ಬಿಗ್ ಮನೆಗೆ ಕಾಲಿಟ್ಟ ದಿನದಿಂದಲೇ ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಮೊದಲ ವಿನಯ್ ಬಾಯಿಗೆ ಆಹಾರವಾಗಿದ್ದರು. ಆ ನಂತರ ಸ್ನೇಹಿತ್ ಕೆಂಗಣ್ಣಿಗೆ ಗುರಿಯಾಗಿದ್ದರು. ಬೇರೇ ಅವರ ವಿಚಾರದಲ್ಲಿ ಭಾಗ್ಯ ಮುಗುತುರಿಸುತ್ತಾರೆ ಎಂದು ಕಾರಣ ನೀಡಿ ಭಾಗ್ಯ ಕಳಪೆ ಎಂದಿದ್ದರು ಸ್ನೇಹಿತ್.

ಭಾಗ್ಯ ಅವರಿಗೆ ಕಳೆದ ಬಾರಿ ಎಲಿಮಿನೇಷನ್ ಬಿಸಿ ತಟ್ಟಿದ ಮೇಲೆ ಚುರುಕಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕೊಂಚ ಸ್ವೀಡ್ ಕೂಡ ಆಗಿದ್ದರು. ಈಗ ಅವರ ಎಲಿಮಿನೇಷನ್ ಮನೆಮಂದಿಗೆ ಮತ್ತು ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಸ್ನೇಕ್ ಶ್ಯಾಮ್, ರಕ್ಷಕ್, ಇಶಾನಿ ನಂತರ ಭಾಗ್ಯಶ್ರೀಗೆ ಎಲಿಮಿನೇಟ್ ಆಗಿದ್ದಾರೆ.

Share This Article